ಕ್ರಿಸ್ಪಿ ಅವಲಕ್ಕಿ ಕಟ್ಲೆಟ್
ಬೇಕಾಗುವ ಸಾಮಾಗ್ರಿಗಳು
ಅವಲಕ್ಕಿ – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1/2 ಕಪ್
ಗರಂ ಮಸಾಲ – 1/2 ಚಮಚ
ಅರಿಶಿನ ಪುಡಿ – 1/4 ಚಮಚ
ಜೀರಿಗೆ – 1/4 ಚಮಚ
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 1
ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ – 2
ರುಚಿಗೆ ತಕ್ಕಷ್ಟು ಉಪ್ಪು
ಬ್ರೆಡ್ ಹುಡಿ – 1/2 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಣ್ಣದಾಗಿ ಕತ್ತರಿಸಿದ ಗೋಡಂಬಿ – 10

ಮಾಡುವ ವಿಧಾನ
ಅವಲಕ್ಕಿಯನ್ನು ತೊಳೆದು ನೀರು ಬಸಿದು 10 ನಿಮಿಷ ನೆನೆಯಲು ಬಿಡಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಗರಂ ಮಸಾಲ, ಅರಿಶಿನ ಪುಡಿ, ಗೋಡಂಬಿ ತುಂಡುಗಳು, ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಆಲೂಗಡ್ಡೆ, ಉಪ್ಪು ಇವೆಲ್ಲವನ್ನೂ ಸೇರಿಸಿ ಹಿಟ್ಟು ಮೃದುವಾಗುವವರೆಗೆ ಚೆನ್ನಾಗಿ ನಾದಿ. ನಂತರ 15 ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ ಬೇಕಾದ ಆಕಾರದಲ್ಲಿ ಕಟ್ಲೇಟ್ ತಯಾರಿಸಿ ಅದಕ್ಕೆ ಬ್ರೆಡ್ ಹುಡಿ ಲೇಪಿಸಿ.
ಈಗ ತವಾದಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ, ನಂತರ ಕಟ್ಲೇಟ್ ಗಳನ್ನು ಹಾಕಿ ಎರಡೂ ಬದಿಯೂ ಹೊಂಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ಬಿಸಿಯಾದ ಕ್ರಿಸ್ಪಿ ಅವಲಕ್ಕಿ ಕಟ್ಲೆಟ್ ಗಳನ್ನು ಸಾಸ್ ಜೊತೆಗೆ ಸವಿಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1400339795428233217?s=19
https://twitter.com/SaakshaTv/status/1400611335294132227?s=19
https://twitter.com/SaakshaTv/status/1400339795692433408?s=19
https://twitter.com/SaakshaTv/status/1400641558563672068?s=19
#Saakshatv #cookingrecipe #avalakkicutlets








