ಆರೋಗ್ಯಕರ ಪುದೀನ ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1 ಕಪ್
ಸಣ್ಣದಾಗಿ ಕತ್ತರಿಸಿದ ಪುದೀನ ಸೊಪ್ಪು – 1 ಕಪ್
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ – 1/4 ಕಪ್
ಈರುಳ್ಳಿ – 1
ಕಡ್ಲೆ ಬೇಳೆ – 2 ಚಮಚ
ಉದ್ದಿನ ಬೇಳೆ – 2 ಚಮಚ
ಕಡ್ಲೆ ಕಾಯಿ ಬೀಜ/ನೆಲಕಡಲೆ – ಸ್ವಲ್ಪ
ಸಾಸಿವೆ -1 ಚಮಚ
ಅರಿಶಿಣ – 1/4 ಚಮಚ
ಹಸಿಮೆಣಸು – 2
ಕರಿಬೇವಿನ ಸೊಪ್ಪು – 2
ದನಿಯ ಪೌಡರ್ – 1/2 ಚಮಚ
ಗರಂ ಮಸಾಲ – 1/4 ಚಮಚ
ಶುಂಠಿ ಒಂದು ಇಂಚು
ಬೆಳ್ಳುಳ್ಳಿ 5 ಎಸಳು
ನಿಂಬೆ ಹಣ್ಣು 1
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು ಉದುರು ಉದುರಾಗಿ ಅನ್ನವನ್ನು ಮಾಡಿಟ್ಟುಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಪುದಿನ, ಕೊತ್ತಂಬರಿ, ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ, ಉಪ್ಪು ಸೇರಿಸಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ನೆಲಕಡಲೆ/ಕಡ್ಲೆ ಬೀಜಗಳನ್ನು ಹುರಿದು ತೆಗೆಯಿರಿ. ನಂತರ ಆ ಎಣ್ಣೆಗೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ, ಕರಿಬೇವಿನ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕಡ್ಲೆ ಬೇಳೆ, ಉದ್ದಿನ ಬೇಳೆ, ಹಾಕಿ ಒಗ್ಗರಣೆ ಮಾಡಿ. ನಂತರ ನುಣ್ಣಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಇದಕ್ಕೆ, ಅರಿಶಿನ, ಉಪ್ಪು, ಗರಂ ಮಸಾಲ, ದನಿಯ ಪೌಡರ್ ಸೇರಿಸಿ ಎಣ್ಣೆ ಬಿಡುವವರೆಗೂ ಕುದಿಸಿ. ಬಳಿಕ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹುರಿದಿಟ್ಟುಕೊಂಡ ನೆಲಕಡಲೆ/ಕಡ್ಲೆ ಬೀಜ, ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ನಿಂಬೆ ರಸ ಹಿಂಡಿ ಚೆನ್ನಾಗಿ ಬೆರೆಸಿದರೆ ರುಚಿಯಾದ ಪುದೀನ ಚಿತ್ರಾನ್ನ ಸವಿಯಲು ಸಿದ್ಧ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಗಳು#Saakshatv #healthtips #homeremedies #improveimmunity https://t.co/Wl5YTeOQAB
— Saaksha TV (@SaakshaTv) June 5, 2021
ಎಗ್ ಕಬಾಬ್ https://t.co/ew7PxrTVda
— Saaksha TV (@SaakshaTv) June 6, 2021
ಮೊಸರಿಗೆ ಏನನ್ನು ಬೆರೆಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು? – ಇಲ್ಲಿದೆ ಡಯೆಟಿಷಿಯನ್ ಸಲಹೆ#Saakshatv #healthtips #immunity https://t.co/rUUIj2atbJ
— Saaksha TV (@SaakshaTv) June 6, 2021
ರಂಬೂಟನ್ ಹಣ್ಣಿನ ಕೃಷಿ ಅಡಿಕೆ, ರಬ್ಬರ್ ಗಿಂತ ಹೆಚ್ಚು ಲಾಭದಾಯಕ#Rambutanfruit https://t.co/KM23CLP2TS
— Saaksha TV (@SaakshaTv) June 6, 2021
#Saakshatv #cookingrecipe #pudina #chitranna








