ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ : ಸಾ ರಾ ಮಹೇಶ್
ಮೈಸೂರು : ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ ಸಂವೇದನಶೀಲತೆಯಿಲ್ಲದ ಅಧಿಕಾರಿ. ಒಬ್ಬ ಸಚಿವನಿಗೆ ಮನೆ ನವೀಕರಣಕ್ಕೆ 2 ಲಕ್ಷ ನೀಡಲಾಗುತ್ತದೆ. ಆದರೆ ಇವರು ಅಂದಾಜು 65 ಲಕ್ಷ ಖರ್ಚು ಮಾಡಿ ಡಿಸಿ ಸರ್ಕಾರಿ ನಿವಾಸ ನವೀಕರಣ ಮಾಡಿಸಿದ್ದಾರೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಸಾ ರಾ ಮಹೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ನಿರ್ಗಮಿಸಿ ಮೂರು ದಿನವಾದರೂ ಅವರ ವಿರುದ್ಧ ಸಾ ರಾ ಮಹೇಶ್ ಆರೋಪಗಳ ಸುರಿಮಳೆ ಗೈಯುತ್ತಲೇ ಇದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರ್ಗಮಿತ ಡಿಸಿ ಆರೋಪಿಸಿರುವಂತೆ ಮೈಸೂರಿನಲ್ಲಿ ನಡೆದಿರುವ ಭೂ ಹಗರಣಗಳ ಬಗ್ಗೆ ಸರ್ಕಾರ ತನಿಖೆ ಮಾಡಬೇಕು. ಅದಕ್ಕಾಗಿ ತನಿಖಾ ಸಮಿತಿ ರಚಿಸಿ. ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ ಸಂವೇದನಶೀಲತೆಯಿಲ್ಲದ ಅಧಿಕಾರಿ ಎಂದು ಟೀಕಿಸಿದರು.
ಇನ್ನು ಒಬ್ಬ ಸಚಿವನಿಗೆ ಮನೆ ನವೀಕರಣಕ್ಕೆ 2 ಲಕ್ಷ ನೀಡಲಾಗುತ್ತದೆ. ಆದರೆ ಇವರು ಅಂದಾಜು 65 ಲಕ್ಷ ಖರ್ಚು ಮಾಡಿ ಡಿಸಿ ಸರ್ಕಾರಿ ನಿವಾಸ ನವೀಕರಣ ಮಾಡಿಸಿದ್ದಾರೆ. ಇದಕ್ಕೆ ಯಾರು ಅನುಮತಿ ನೀಡಿದರು ಎಂದು ಪ್ರಶ್ನಿಸಿದರು.
ಮುಂದುವರೆದು ರೋಹಿಣಿ ಸಿಂಧೂರಿ ಸೇವೆ ಮಾಡಲು ಅಲ್ಲ ಮೈಸೂರಿಗೆ ಬಂದಿದ್ದು ಎಂದ ಸಾ ರಾ ಮಹೇಶ್, ಮೈಸೂರು ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಮೂರು ಕೆಇಬಿ ಮೀಟರ್ ಇವೆ. ಹಿಂದೆ ಇದರ ಒಟ್ಟಾರೆ ಬಿಲ್ ಐದಾರು ಸಾವಿರ ಬರುತ್ತಿತ್ತು. ರೋಹಿಣಿ ಸಿಂಧೂರಿ ಬಂದ ನಂತರ ಒಂದು ತಿಂಗಳಿಗೆ 50 ಸಾವಿರ ಕರೆಂಟ್ ಬಿಲ್ ಬಂದಿದೆ. ಗಾರ್ಡನ್ ಲೈಟಿಂಗ್ಸ್, ಜಿಮ್, ಸ್ವೀಮಿಂಗ್ ಫೂಲ್, ಮನೆಯೊಳಗಿನ ದೀಪಾಲಕದಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಆರೋಪಿಸಿದರು.









