ಸಬ್ಬಕ್ಕಿ – ಹೆಸರುಬೇಳೆ ದೋಸೆ
ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ 1/2 ಕಪ್
ಹೆಸರು ಬೇಳೆ 1 ಕಪ್
ಕ್ಯಾರೆಟ್ 1
ಈರುಳ್ಳಿ 1
ಟೊಮ್ಯಾಟೊ 1
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನಕಾಯಿ ತುರಿ 2 ಚಮಚ

ಮಾಡುವ ವಿಧಾನ
ಮೊದಲಿಗೆ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಅದನ್ನು 4 ಗಂಟೆಗಳ ಕಾಲ ಮುಳುಗುವಷ್ಟು ನೀರಿನಲ್ಲಿ ನೆನೆಯಲು ಬಿಡಿ.
ಹೆಸರುಬೇಳೆಯನ್ನು ಸಹ ಚೆನ್ನಾಗಿ ತೊಳೆದು 2 – 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ಬಳಿಕ ಸಬ್ಬಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ. ನಂತರ ಅದಕ್ಕೆ ಹೆಸರು ಬೇಳೆ ಸೇರಿಸಿ ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ರುಬ್ಬಿ. ಈ ಮಿಶ್ರಣಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ ಹಾಗೆಯೆ ಬಿಡಿ.
ನಂತರ ಕ್ಯಾರೆಟ್, ಈರುಳ್ಳಿ, ಟೊಮೆಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಚಿಕ್ಕದಾಗಿ ಕತ್ತರಿಸಿ ಅದಕ್ಕೆ ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಪಕ್ಕದಲ್ಲಿ ಇಡಿ.
ಈಗ ದೋಸೆ ತವೆಗೆ ತುಪ್ಪ ಸವರಿ ಬಿಸಿ ಮಾಡಿ. ದೋಸೆ ಹಿಟ್ಟು ಹೊಯ್ಯಿದು ಸ್ವಲ್ಪ ದಪ್ಪವಾಗಿ ದೋಸೆ ಮಾಡಿ. ಮೇಲೆ ತುಪ್ಪ ಹಾಕಿ ತರಕಾರಿಗಳ ಮಿಶ್ರಣವನ್ನು ಸಿಂಪಡಿಸಿ. ಇನ್ನೊಂದು ಬದಿ ತಿರುವಿ ಹಾಕಿ ಚೆನ್ನಾಗಿ ಕಾಯಿಸಿ. ಈಗ ರುಚಿಯಾದ ಸಬ್ಬಕ್ಕಿ ಹೆಸರುಬೇಳೆ ದೋಸೆ ಕಾಯಿಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಸೋರೆಕಾಯಿ ರಸ ಕುಡಿಯುವ ಮೊದಲು ತಿಳಿದಿರಬೇಕಾದ ವಿಷಯಗಳು#bottlegourdjuice https://t.co/XKaVJHuFCv
— Saaksha TV (@SaakshaTv) June 15, 2021
ಸೂಪರ್ ಟೇಸ್ಟಿ ಮಿಕ್ಸೆಡ್ ವೆಜ್ ಫ್ರೈಡ್ ರೈಸ್#Saakshatv #cookingrecipe #friedrice https://t.co/mX1dPaMfGd
— Saaksha TV (@SaakshaTv) June 14, 2021
ಅಸಲಿ ಮತ್ತು ನಕಲಿ ಕಡ್ಲೆಹಿಟ್ಟನ್ನು ಗುರುತಿಸುವುದು ಹೇಗೆ?#gramfloor https://t.co/drFJqpaBXo
— Saaksha TV (@SaakshaTv) June 15, 2021
ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೇವಲ 250 ರೂ ಹೂಡಿಕೆ ಮಾಡಿ ಮಗಳ ಹೆಸರಿನಲ್ಲಿ ಈ ಖಾತೆ ತೆರೆಯಿರಿ https://t.co/v2LC1OOsAb
— Saaksha TV (@SaakshaTv) June 14, 2021
ರವಾ ಗೋಳಿ ಬಜೆ#Saakshatv #cookingrecipe #Raavagolibaje https://t.co/Vx9KNJcvFe
— Saaksha TV (@SaakshaTv) June 13, 2021
#Saakshatv #cookingrecipe #sabbakkihesarubele








