ನಾನು ಯಾರಪ್ಪನ ಮರ್ಜಿಯಲ್ಲಿ ಇಲ್ಲ : ಸ್ವಪಕ್ಷೀಯರ ವಿರುದ್ಧ ಹಳ್ಳಿಹಕ್ಕಿ ಗುಡುಗು h-vishwanath
ಮೈಸೂರು : ನಾನು ಯಾರಪ್ಪನ ಮರ್ಜಿಯಲ್ಲಿ ಇಲ್ಲ. ಇಡೀ ಸರ್ಕಾರವೇ ನಮ್ಮ ಮರ್ಜಿಯಲಿದೆ ಎಂದು ಸ್ವಪಕ್ಷದವರ ವಿರುದ್ಧ ಮತ್ತೆ ಎಂಎಲ್ ಸಿ ಹೆಚ್ ವಿಶ್ವನಾಥ್ ಗುಡುಗಿದ್ದಾರೆ.
ಇಂದು ಪಿರಿಯಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ವಿಶ್ವನಾಥ್, ನಾವು ಯಾರ ಹಂಗಿನಲ್ಲೂ ಇಲ್ಲ. ಸರ್ಕಾರ, ಮಂತ್ರಿಗಳು ಹಾಗೂ ನಿಗಮ ಮಂಡಳಿಯ ಅಧ್ಯಕ್ಷರು ಇವರೆಲ್ಲ ನಮ್ಮ ತ್ಯಾಗದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಗರಂ ಆದರು.
ಮಂತ್ರಿ, ಮುಖ್ಯಮಂತ್ರಿ ನಮ್ಮ ತ್ಯಾಗದಿಂದ ಬಂದವರಾಗಿದ್ದಾರೆ. ನಮ್ಮ ಮರ್ಜಿಯಲ್ಲೇ ಮುಖ್ಯಮಂತ್ರಿಗಳು ಇದ್ದಾರೆ, ನಾವು ಯಾರ ಮರ್ಜಿಯಲ್ಲೂ ಇಲ್ಲ. ನಮ್ಮ ತ್ಯಾಗದಿಂದ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾನೆ, ಇವರಿಗೆ ಅಧಿಕಾರ ಸಿಕ್ಕಿದೆ ಎಂದು ಕಿಡಿಕಾರಿದರು.









