ಭಾರತದಲ್ಲಿ ತುರ್ತು ಅಗತ್ಯ ಪೂರೈಕೆ ನಂತರ ಲಸಿಕೆ ರಫ್ತಿಗೆ ಕೇಂದ್ರದ ಚಿಂತನೆ..!
ವಿಶ್ವಾದ್ಯಂತ ಕೋವಿಡ್ 2ನೇ ಅಲೆ ಇನ್ನಿಲ್ಲದಂತೆ ಅಬ್ಬರಿಸಿದ್ದು, ಈ ನಡುವೆ ಲಸಿಕೆ ಅಭಿಯಾನವು ಜಾರಿಯಲ್ಲಿದೆ.. ಅಲ್ಲದೇ ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕೆ ಉತ್ಪಾದನಾ ರಾಷ್ಟ್ರವೂ ಬಾರತವೇ ಆಗಿದೆ..
ಈ ನಡುವೆ ಭಾರತ, ಕೋವಿಡ್ ಲಸಿಕೆ ರಫ್ತು ಮಾಡುವ ಚಿಂತನೆ ನಡೆಸಿದೆ. ನಮ್ಮ ರಾಷ್ಟ್ರದ ಪ್ರಜೆಗಳಿಗೆ ಸಾಕಾಗುವಷ್ಟು ಡೋಸ್‌ಗಳು ಉತ್ಪಾದನೆ ಆದ ಬಳಿಕ ವಿದೇಶಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೋವಿಡ್-19 ಟಾಸ್ಕ್ ಫೋರ್ಸ್‌ನ ಮುಖ್ಯಸ್ಥರಾದ ಡಾ. ವಿನೋದ್ ಕೆ ಪೌಲ್ ಅವರು ತಿಳಿಸಿದ್ದಾರೆ.
ನಮ್ಮ ರಾಷ್ಟ್ರದ ಜನತೆಗೆ ಡೋಸ್‌ಗಳ ತುರ್ತು ಅಗತ್ಯ ಪೂರ್ಣಗೊಂಡ ಬಳಿಕ ಇತರರಿಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಇತರರಿಗೆ ನೆರವಾಗುವ ದೃಷ್ಟಿಯಿದೆ ಎಂದು ತಿಳಿಸಿದ್ದಾರೆ.
ಜನವರಿ 2021ರಲ್ಲಿ 90ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲು ಆರಂಭಿಸಿತ್ತು. ಆದರೆ ಕೋವಿಡ್ ಸೋಂಕು ವಿಪರೀತವಾಗಿ ವ್ಯಾಪಿಸಿದ ಹಿನ್ನೆಲೆ ತಜ್ಞರು ಲಸಿಕೆ ಪೂರೈಕೆಯನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದರು. ಇದೀಗ ಮತ್ತೆ ನಮ್ಮ ದೇಶದ ಪ್ರಜೆಗಳಿಗೆ ಸಾಕಷ್ಟವಷ್ಟು ಡೋಸ್ ಗಳ ುತ್ಪಾದನೆಯ ನಂತರ ರಫ್ತು ಮಾಡುವ ಚಿಂತನೆ ನಡೆಸಿದೆ.