ಬೇಕಾಗುವ ಸಾಮಗ್ರಿಗಳು
ಪನೀರ್-1 ಕಪ್
ಈರುಳ್ಳಿ-1
ಟೊಮ್ಯಾಟೋ-1
ಕ್ಯಾಪ್ಸಿಕಂ-1
ಹಸಿ ಮೆಣಸಿನಕಾಯಿ-1
ಅಚ್ಚ ಖಾರದ ಪುಡಿ-1ಟೀ ಚಮಚ
ಗರಂ ಮಸಾಲ- ಅರ್ಧ ಟೀ ಚಮಚ
ಅರಿಶಿನ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಒಗ್ಗರಣೆಗೆ- ಎಣ್ಣೆ, ಜೀರಿಗೆ
ಮಾಡುವ ವಿಧಾನ
ಮೊದಲಿಗೆ ಪನೀರ್ ಅನ್ನು ಪುಡಿ ಮಾಡಿಟ್ಟುಕೊಳ್ಳಿ.
ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ. ಕಾದ ಮೇಲೆ ಜೀರಿಗೆ ಹಾಕಿ ಸಿಡಿಸಿ. ಬಳಿಕ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ಟೊಮ್ಯಾಟೋ ಹಾಕಿ ಹಸಿವಾಸನೆ ಹೋಗುವವರೆಗೆ ಬಾಡಿಸಿ. ಈಹ ಕ್ಯಾಪ್ಸಿಕಂ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಅರಿಶಿನ, ಅಚ್ಚ ಖಾರದ ಪುಡಿ, ಗರಂ ಮಸಾಲ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ನಂತರ ಪುಡಿ ಮಾಡಿದ ಪನೀರ್ ಹಾಕಿ. ಮಸಾಲ ಚೆನ್ನಾಗಿ ಬೆರೆಯುವವರೆಗೆ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಈಗ ರುಚಿಯಾದ ಪನೀರ್ ಬುರ್ಜಿ ರೆಡಿಯಾಗಿದೆ. ಇದನ್ನು ರೋಟಿ ಅಥವಾ ಚಪಾತಿ ಜೊತೆ ಸರ್ವ್ ಮಾಡಿ.








