ನಾನು ರಾಜಕೀಯದ ಬಗ್ಗೆ ಏನೂ ಮಾತನಾಡಲ್ಲ : ಅರವಿಂದ್ ಬೆಲ್ಲದ್ Arvind Bellad
ಧಾರವಾಡ : ಕೆಲ ದಿನಗಳಿಂದ ರಾಜಕೀಯ ಬೆಳವಣಿಗೆಗಳ ಪ್ರಮುಖ ಕೇಂದ್ರ ಬಿಂಧು ಆಗಿದ್ದ ಶಾಸಕ ಅರವಿಂದ್ ಬೆಲ್ಲದ್ ಇದೀಗ ರಾಜಕೀಯ ಕುರಿತ ಪ್ರಶ್ನೆಗಳಿಗೆ ನೋ ಕಾಮೆಂಟ್ಸ್ ಎಂದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ನಾನು ರಾಜಕೀಯದ ಬಗ್ಗೆ ಏನೂ ಮಾತನಾಡಲ್ಲ. ಏನೇ ಇದ್ದರೂ ನಮ್ಮ ಪಕ್ಷದ ನಾಲ್ಕು ಗೊಡೆಗಳ ಮಧ್ಯೆ ಮಾತಾಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಜೈಲಿನಿಂದ ಕೈದಿಯೊಬ್ಬ ಕರೆ ಮಾಡಿರುವ ವಿಚಾರವಾಗಿ ಮಾತನಾಡಿ, ಯುವರಾಜ್ ಎನ್ನುವವನ ಬಗ್ಗೆ ನಾನು ಹೇಳುವುದೆಲ್ಲ ಹೇಳಿದ್ದೇನೆ, ಉಳಿದದ್ದೆಲ್ಲವನ್ನು ಪೆÇಲೀಸರು ತನಿಖೆ ಮಾಡ್ತಾರೆ ಎಂದಿದ್ದಾರೆ.
ಇನ್ನು ಶಾಸಕ ರೇಣುಕಾಚಾರ್ಯ ಸೇರಿದಂತೆ ಕೆಲ ಸ್ವಪಕ್ಷದವರ ಆರೋಪಗಳ ಬಗ್ಗೆ ಉತ್ತರಿಸಲು ನಿರಾಕರಿಸಿದ ಬೆಲ್ಲದ್, ನೋ ಕಾಮೆಂಟ್ಸ್ ಅಷ್ಟೆ ಎಂದರು.










