ಮಾವಿನ ಹಣ್ಣಿನ ಜ್ಯಾಮ್
ಬೇಕಾಗುವ ಸಾಮಗ್ರಿಗಳು
ಮಾವಿನ ಹಣ್ಣು 1
ಸಕ್ಕರೆ 3/4 ಕಪ್
ಮಾಡುವ ವಿಧಾನ
ಮೊದಲಿಗೆ ಮಾವಿನ ಹಣ್ಣಿನ ಸಿಪ್ಪೆಯನ್ನು ತೆಗೆದು ಅದನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಒಂದು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಸಕ್ಕರೆ ಸೇರಿಸಿ. ಬಳಿಕ ಅದಕ್ಕೆ ರುಬ್ಬಿಟ್ಟುಕೊಂಡ ಮಾವಿನ ಹಣ್ಣು ಸೇರಿಸಿ. ನಂತರ ಮಧ್ಯಮ ಉರಿಯಲ್ಲಿ ಕೈಯಾಡಿಸುತ್ತಾ ಇರಿ. ಪಾಕ ಕುದಿಯಲು ಪ್ರಾರಂಭವಾದಾಗ ಕಡಿಮೆ ಉರಿಯಲ್ಲಿ ಕುದಿಸಿ. ಪಾಕದ ಬಣ್ಣ ಬದಲಾಗುತ್ತಾ ಗಟ್ಟಿಯಾಗಲು ಪ್ರಾರಂಭವಾಗುತ್ತದೆ. ಇದು ಮುದ್ದೆಯ ಪಾಕಕ್ಕೆ ಬಂದಾಗ ಬಾಣಲೆಯನ್ನು ಕೆಳಗಿಳಿಸಿ. ಮಿಶ್ರಣವನ್ನು ಮತ್ತೊಮ್ಮೆ ಚೆನ್ನಾಗಿ ಕಲಸಿ ತಣ್ಣಗಾದ ಬಳಿಕ ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಿ. ಇದನ್ನು ಫ್ರಿಡ್ಜ್ ನಲ್ಲಿ ಇಟ್ಟು 25 ದಿವಸ ಉಪಯೋಗಿಸಬಹುದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರಕ್ತ ಹೆಪ್ಪುಗಟ್ಟುವಿಕೆ/ ಥ್ರಂಬೋಸಿಸ್ ಎಂದರೇನು? ಕೋವಿಡ್ ರೋಗಿಗಳಿಗೆ ಇದು ಹೇಗೆ ಅಪಾಯಕಾರಿ?#Saakshatvhealthtips #bloodclotting #thrombosis https://t.co/lGBBNqECko
— Saaksha TV (@SaakshaTv) June 21, 2021
ಮಾವಿನ ಎಲೆಗಳ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು#Saakshatv #healthtipsbenefits #mangoleaves https://t.co/aDEOrNCvat
— Saaksha TV (@SaakshaTv) June 22, 2021
ಕುಂಬಳಕಾಯಿ ಸಿಪ್ಪೆಯ ಚಟ್ನಿ#Saakshatv #cookingrecipe #chutney https://t.co/WNYoO3giym
— Saaksha TV (@SaakshaTv) June 21, 2021
ಲಸಿಕೆ ಪಡೆಯುವ ಮೊದಲು/ನಂತರ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯಗಳು#vaccinated https://t.co/cexv6VVMQa
— Saaksha TV (@SaakshaTv) June 22, 2021
#Saakshatv #cookingrecipe #mangofruits #jam








