ADVERTISEMENT
Tuesday, June 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಾಡ್ರ್ಸ್ ನಲ್ಲಿ ಕಿಟಕಿ ಕ್ಲೀನ್ ಮಾಡುತ್ತಿದ್ದ ಯುವಕ ಮುಂದೆ ನ್ಯೂಜಿಲೆಂಡ್ ತಂಡದ ಕೋಚ್ ಆಗಿದ್ದು ಹೇಗೆ ?

admin by admin
June 26, 2021
in Newsbeat, Sports, ಕ್ರೀಡೆ
Gary Stead newzealand coach saakshatv
Share on FacebookShare on TwitterShare on WhatsappShare on Telegram

ಲಾಡ್ರ್ಸ್ ನಲ್ಲಿ ಕಿಟಕಿ ಕ್ಲೀನ್ ಮಾಡುತ್ತಿದ್ದ ಯುವಕ ಮುಂದೆ ನ್ಯೂಜಿಲೆಂಡ್ ತಂಡದ ಕೋಚ್ ಆಗಿದ್ದು ಹೇಗೆ ?

Gary Stead newzealand coach saakshatvನ್ಯೂಜಿಲೆಂಡ್ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಮಿಸ್ಟರ್ ಕೂಲ್ ಖ್ಯಾತಿಯ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸಾರ್ಥಕತೆಯ ಭಾವದಲ್ಲಿದ್ದಾರೆ. ನ್ಯೂಜಿಲೆಂಡ್ ಆಟಗಾರರು ಗೆಲುವಿನ ಆಮಲಿನಲ್ಲಿ ತೇಲಾಡುತ್ತಿದ್ದಾರೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ. ಐತಿಹಾಸಿಕ ಜಯ ಸಾಧಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ಗೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಗೆಲುವು ಅವಿಸ್ಮರಣೀಯ.

Related posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

June 15, 2026
ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

June 15, 2026

ಅಂದ ಹಾಗೇ ನ್ಯೂಜಿಲೆಂಡ್ ತಂಡದ ಈ ಗೆಲುವಿನ ಹಿಂದಿನ ಮಾಸ್ಟರ್ ಪ್ಲಾನ್ ಕೋಚ್ ಗ್ಯಾರಿ ಸ್ಟೇಡ್. 2019ರ ಏಕದಿನ ವಿಶ್ವ ಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನ್ಯೂಜಿಲೆಂಡ್ ತಂಡಕ್ಕೆ ಆತ್ಮಬಲವನ್ನು ತುಂಬಿದ್ದು ಹೆಡ್ ಕೋಚ್ ಗ್ಯಾರಿ ಸ್ಟೇಡ್. ಯುವ ಆಟಗಾರರ ಪ್ರತಿಭೆಯನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಕಟ್ಟಿದ್ದ ಹೆಗ್ಗಳಿಕೆ ಕೂಡ ಗ್ಯಾರಿ ಸ್ಟೇಡ್ ಗೆ ಸಲ್ಲುತ್ತದೆ.
ನ್ಯೂಜಿಲೆಂಡ್ ತಂಡದ ಈ ಯಶಸ್ಸಿನ ಹಿಂದೆ ಗ್ಯಾರಿ ಸ್ಟೇಡ್ ಅವರ ಐದು ವರ್ಷಗಳ ಶ್ರಮವಿದೆ. ತರಬೇತುದಾರನಾಗಿ ಆಯ್ಕೆಯಾದ ಎರಡೇ ವರ್ಷದಲ್ಲಿ ನ್ಯೂಜಿಲೆಂಡ್ ತಂಡವನ್ನು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‍ಗೇರಿಸಿದ್ದ ಖ್ಯಾತಿಯೂ ಕೋಚ್ ಗ್ಯಾರಿ ಸ್ಟೇಡ್ ಅವರದ್ದಾಗಿದೆ. ನಂತರದ ಎರಡು ವರ್ಷಗಳಲ್ಲಿ ತಂಡವನ್ನು ಟೆಸ್ಟ್ ಕ್ರಿಕೆಟ್ ನ ನಂಬರ್ ವನ್ ತಂಡವಾಗಿ ರೂಪಿಸಿದ್ದ ಹೆಗ್ಗಳಿಕೆ ಕೂಡ ಇವರ ಹೆಸರಿಗೆ ಸೇರ್ಪಡೆಯಾಗಿದೆ.

Gary Stead newzealand coach saakshatvಅಷ್ಟಕ್ಕೂ ಯಾರು ಈ ಗುರು ಗ್ಯಾರಿ ಸ್ಟೇಡ್ ಯಾರು ?

31 ವರ್ಷಗಳ ಹಿಂದೆ ನ್ಯೂಜಿಲೆಂಡ್ ತಂಡದ ಗುರು ಗ್ಯಾರಿ ಸ್ಟೇಡ್ ಏನು ಮಾಡುತ್ತಿದ್ದರು ?

2019ರಲ್ಲಿ ಲಾಡ್ರ್ಸ್ ಮೈದಾನದ ಬಾಲ್ಕನಿಯ ಕಿಟಕಿಗಳನ್ನು ನೋಡಿದಾಗ ಆ ದಿನಗಳು ನೆನಪಾಗಿದ್ದು ಯಾಕೆ ?

ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ಯಾರಿ ಸ್ಟೇಡ್ ನ್ಯೂಜಿಲೆಂಡ್ ತಂಡದ ಕೋಚ್ ಆಗಿದ್ದು ಹೇಗೆ ?

ಕ್ರಿಕೆಟ್ ಆಟಗಾರನ ಬದಲು ತರಬೇತುದಾರನಾಗಿ ಗ್ಯಾರಿ ಸ್ಟೇಡ್ ರೂಪುಗೊಂಡಿದ್ದು ಯಾವಾಗ ?

ತಾನೊಬ್ಬ ನತದೃಷ್ಟ ಅಂತ ಅಂದಕೊಂಡಿದ್ದ ಗ್ಯಾರಿ ಸ್ಟೇಡ್ ಬದುಕಿನ ಗತಿ ಬದಲಾಗಿದ್ದು ಎಲ್ಲಿ ?

ಇದು ಅಚ್ಚರಿಯಾದ್ರೂ ಸತ್ಯ… ಹಾಗಂತ ಇದು ಕನಸು ಅಲ್ಲ.. ಆದ್ರೆ ಹೀಗೆಲ್ಲಾ ಆಗುತ್ತೆ ಅಂತ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಆದ್ರೂ ಇಂತಹ ಅದೃಷ್ಟ ಎಲ್ಲರಿಗೂ ಬರುವುದಿಲ್ಲ.

ಹೌದು, ಇದು ಸರಿ ಸುಮಾರು 31 ವರ್ಷಗಳ ಹಿಂದಿನ ನೈಜ ಘಟನೆ. ಅಂದ ಹಾಗೇ, ಈಗೀನ ಈ ಅದೃಷ್ಟವಂತ ಕೋಚ್ ಗೆ ಆಗ 18ರ ಹರೆಯ.. ಅಂದ್ರೆ ಈಗ ಅವರಿಗೆ 49ರ ಪ್ರಾಯ. ಈ ಹರೆಯದಲ್ಲಿ ಅವರು ಏನು ಮಾಡಬೇಕು ಅದನ್ನು ಮಾಡಿಯಾಗಿದೆ. ಈಗ ತನ್ನ ವೃತ್ತಿ ಬದುಕಿನ ಮಹತ್ವದ ಸಾಧನೆಯ ಗರಿ ಅವರ ಹೆಸರಿಗೆ ಅಂಟಿಕೊಂಡಿದೆ.

ಅಂದ ಹಾಗೇ, ಈ ಗ್ಯಾರಿ ಸ್ಟೇಡ್ ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳಬಹುದು. ಯಾಕಂದ್ರೆ ಭಾರತೀಯ ಕ್ರಿಕೆಟ್ ಗೆ ಈ ಹೆಸರು ಅಷ್ಟೊಂದು ಚಿರಪರಿಚಿತವಲ್ಲ. ವಿಶ್ವ ಕ್ರಿಕೆಟ್ ನಲ್ಲೂ ಈ ಹೆಸರು ಅಲ್ಪಸ್ವಲ್ಪ ಕೇಳಿ ಬರುತ್ತಿತ್ತು. ಆದ್ರೆ ನ್ಯೂಜಿಲೆಂಡ್ ಕ್ರಿಕೆಟ್ ವಲಯದಲ್ಲಿ ಗ್ಯಾರಿ ಸ್ಟೇಡ್ ಅನ್ನೋ ಹೆಸರಿಗೆ ತನ್ನದೇ ಆದ ಮಹತ್ವವಿದೆ.

Gary Stead newzealand coach saakshatvಹಂತ ಹಂತವಾಗಿ ಬೆಳೆದಿರುವ ಗ್ಯಾರಿ ಸ್ಟೇಡ್ ಅವರನ್ನು ಗುರುವಿನ ಸ್ಥಾನದಲ್ಲಿ ಗೌರವಿಸಲಾಗುತ್ತಿದೆ. ಯಾಕಂದ್ರೆ ಗ್ಯಾರಿ ಸ್ಟೇಡ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಮಾತ್ರವಲ್ಲ. ನ್ಯೂಜಿಲೆಂಡ್ ಕ್ರಿಕೆಟ್ ಗೆ ಹೊಸ ಆಯಾಮವನ್ನು ನೀಡಿದ ಗುರು.

2019ರಲ್ಲಿ ನ್ಯೂಜಿಲೆಂಡ್ ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಗ್ಯಾರಿ ಸ್ಟೇಡ್ ನ ಚಾಣಕ್ಯ ತಂತ್ರವಿತ್ತು. ಅಷ್ಡೆ ಅಲ್ಲ, ಆಗ ಲಾಡ್ರ್ಸ್ ಮೈದಾನವನ್ನು ಪೆವಿಲಿಯನ್ ನಲ್ಲಿ ಕುಳಿತುಕೊಂಡು ನೋಡಿದಾಗ ಹಳೆಯ ದಿನಗಳು ಕಣ್ಣ ಮುಂದೆ ಹಾದು ಹೋದವು.
ಅಷ್ಟಕ್ಕೂ ಗ್ಯಾರಿ ಸ್ಟೇಡ್ ಲಾಡ್ರ್ಸ್ ಮೈದಾನದಲ್ಲಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ. ನಿಜ, ಗ್ಯಾರಿ ಸ್ಟೇಡ್ 1990ರಲ್ಲಿ ಲಾಡ್ರ್ಸ್ ಕ್ರೀಡಾಂಗಣದ ಪೆವಿಲಿಯನ್ ನ ಕಿಟಕಿಗಳನ್ನು ಕ್ಲೀನ್ ಮಾಡುತ್ತಿದ್ದರು. ಯಾಕಂದ್ರೆ ಗ್ಯಾರಿ ಸ್ಟೇಡ್ ಎಂಸಿಸಿ ಗ್ರೌಂಡ್ ಸ್ಟಾಫ್ ಆಗಿದ್ದರು. ಆದ್ರೆ 29 ವರ್ಷಗಳ ಬಳಿಕ ಅಂದ್ರೆ 2019ರಲ್ಲಿ ಅದೇ ಗ್ಯಾರಿ ಸ್ಠೇಡ್ ಅವರು ಅದೇ ಲಾಡ್ರ್ಸ್ ಮೈದಾನದ ಬಾಲ್ಕನಿಯಲ್ಲಿ ಆರಾಮವಾಗಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಿದ್ದರು. ಅದೂ ಒಂದು ತಂಡದ ಗೆಲುವಿಗಾಗಿ ರಣ ತಂತ್ರ ರೂಪಿಸುವ ತರಬೇತುದಾರನಾಗಿ. ಎಂತಹ ಅಚ್ಚರಿ ಅಲ್ವಾ

ಅಂದ ಹಾಗೇ, ಗ್ಯಾರಿ ಸ್ಟೇಡ್ ಅವರು ನ್ಯೂಜಿಲೆಂಡ್ ಪರ ಆಡಿದ್ದು ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಮಾತ್ರ. ಅದು ಕೂಡ 9 ತಿಂಗಳು ಮಾತ್ರ. 34ರ ಸರಾಸರಿಯಲ್ಲಿ 278 ರನ್ ಗಳಿಸಿದ್ದಾರೆ. 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಗ್ಯಾರಿ ಸ್ಟೇಡ್ ಮೂರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಆದ್ರೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಳಪೆ ಆಟವಾಡಿದ್ದ ಕಾರಣ ತಂಡದಿಂದಲೇ ಹೊರಬಿದ್ರು.

Gary Stead newzealand coach saakshatvಆರಂಭಿಕ ಆಟನಾರನಾಗಿರುವ ಗ್ಯಾರಿ ಸ್ಟೇಡ್ ತನ್ನ ಕೊನೆಯ ಟೆಸ್ಟ್ ಪಂದ್ಯದಲ್ಲಿ 17 ರನ್ ಗಳಿಸಿದ್ದರು. ಬಳಿಕ ದೇಸಿ ಕ್ರಿಕೆಟ್ ನಲ್ಲಿ ರನ್ ಮಳೆ ಸುರಿಸಿದ್ರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಆದ್ರೆ ನಂತರ ಗ್ಯಾರಿ ಸ್ಟೇಡ್ ಅವರು ನ್ಯೂಜಿಲೆಂಡ್ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. 27ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಟ್ಟು ಅಷ್ಟೇ ವೇಗದಲ್ಲಿ ಮಾಯವಾಗಿದ್ದ ಗ್ಯಾರಿ ಸ್ಟೇಡ್ ಅವರು ಕೋಚಿಂಗ್ ನತ್ತ ಮುಖ ಮಾಡಿದ್ದರು.

ದೇಸಿ ತಂಡಗಳಿಗೆ ತರಬೇತುದಾರನಾಗಿದ್ದ ಗ್ಯಾರಿ ಸ್ಟೇಡ್ 2008ರಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡದ ತರಬೇತುದಾರನಾಗಿ ನೇಮಕಗೊಂಡ್ರು. ನ್ಯೂಜಿಲೆಂಡ್ ಮಹಿಳಾ ತಂಡದ ಕೋಚ್ ಆಗಿ ಯಶ ಸಾಧಿಸಿದ್ದ ಗ್ಯಾರಿ 2018ರಲ್ಲಿ ಪುರುಷರ ತಂಡದ ಕೋಚ್ ಆಗಿ ನೇಮಕಗೊಂಡಿದ್ರು.

Gary Stead newzealand coach saakshatv kane williamsonಒಟ್ಟಿನಲ್ಲಿ ಒಬ್ಬ ಆಟಗಾರನಾಗಿ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇನ್ನು ವಿಶ್ವಕಪ್ ತಂಡದಲ್ಲಿ ಭಾಗಿಯಾಗೋದು ಮರೀಚಿಕೆಯಾಗಿತ್ತು. ಆದ್ರೆ ಈಗ ನ್ಯೂಜಿಲೆಂಡ್ ತಂಡದ ಮಾಸ್ಟರ್ ಮೈಂಡ್ ಆಗಿದ್ದಾರೆ ಗ್ಯಾರಿ ಸ್ಟೇಡ್. ಅಷ್ಟೇ ಅಲ್ಲ, ಲಾಡ್ರ್ಸ್ ಮೈದಾನದಲ್ಲಿ ಕಿಟಕಿಗಳನ್ನು ಕ್ಲೀನ್ ಮಾಡುತ್ತಿದ್ದ ಗ್ರ್ಯಾಂಡ್ ಸ್ಟಾಫ್ ಆಗಿದ್ದ ಗ್ಯಾರಿ ಸ್ಟೇಡ್ ಅದೇ ಲಾಡ್ರ್ಸ್ ಮೈದಾನದ ಬಾಲ್ಕನಿಯಲ್ಲಿ ಕುಳಿತುಕೊಂಡ ವಿಶ್ವಕಪ್ ಗೆಲ್ಲಲು ಪ್ಲಾನ್ ಮಾಡಿದ್ದರು. ಆದ್ರೆ ಅದೃಷ್ಟ ಕೈ ಹಿಡಿಯಲಿಲ್ಲ. ಐಸಿಸಿಯ ವಿಚಿತ್ರ ನಿಯಮದಿಂದಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ರೆ ಈಗ ಅದೇ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೂತ್ರದಾರನಾಗಿ ನ್ಯೂಜಿಲೆಂಡ್ ತಂಡದ ಗೆಲುವಿನ ಪಾತ್ರದಾರನಾದ್ರು.

Tags: #saakshatv2019 wolrd cup cricketenglanaGary SteadICClordsnewzealandnewzealand coachnewzealand cricket head coachwolrd test championWTC final
ShareTweetSendShare
Join us on:

Related Posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

by Shwetha
June 15, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಲ್ಲಿ ನೂರಾರು ಕೋಟಿ ರೂಪಾಯಿ ಸೋರಿಕೆ ಮತ್ತು ದುರ್ಬಳಕೆಯಾಗಿರುವುದು ಪತ್ತೆಯಾಗಿದ್ದು, ಇದನ್ನು ತಡೆಯಲು ಸರ್ಕಾರ ಈಗ...

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

by Shwetha
June 15, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದು, ಗೃಹಲಕ್ಷ್ಮಿ ಯೋಜನೆಯನ್ನು ಚುನಾವಣಾ ಲಕ್ಷ್ಮಿ...

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

by Shwetha
June 15, 2026
0

ಬಾಗಲಕೋಟೆ: ಅನ್ನದಾತನ ತಾಳ್ಮೆಯ ಕಟ್ಟೆ ಒಡೆದರೆ ಏನಾಗುತ್ತದೆ ಎಂಬುದಕ್ಕೆ ಬಾಗಲಕೋಟೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿ ಪಡೆದು, ದಶಕಗಳ ಕಾಲ ಪರಿಹಾರ ನೀಡದೆ...

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

by Shwetha
June 15, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ನೀಡುವ ಮತ್ತು ಲಂಚ ಕೇಳುವ...

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

by Shwetha
June 15, 2026
0

ಬೆಂಗಳೂರು: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಸರ್ಕಾರದ ನಡೆಗಳ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram