ಡೆಲ್ಟಾ ರೂಪಾಂತರ ತಳಿ ಹೆಚ್ಚು ವೇಗವಾಗಿ ಹರಡುತ್ತದೆ – ವಿಶ್ವ ಆರೋಗ್ಯ ಸಂಸ್ಥೆ
ಲಂಡನ್ : ಕೊರೊನಾ 2ನೇ ಅಲೆ ಇನ್ನೇನು ಕಡಿಮೆಯಾಯ್ತು ಅಂತ ಜನರು ನಿರಾಳರಾಗುತ್ತಿದ್ದ ಸಮಯದಲ್ಲಿ , ಬ್ಲಾಕ್ ಫಂಗಸ್ ಕಾಟ, ಈಗ ಡೆಲ್ಟಾ ಪ್ಲಸ್ ನ ಆತಂಕ ಶುರುವಾಗಿದೆ.. ಈ ನಡುವೆ ಕೊರೊನಾ ರೂಪಾಂತರ ತಳಿ ಡೆಲ್ಟಾ ವೈರಸ್ ನ ಬಗ್ಗೆ ಮತ್ತೊಂದು ಆಘತಕಾರಿ ಸಂಗತಿಯೂ ಬಹಿರಂಗವಾಗಿದೆ..
ಈವರೆಗೆ ಪತ್ತೆಯಾಗಿರುವ ರೂಪಾಂತರಿತ ವೈರಸ್‌ಗಳಲ್ಲೇ ಅತಿ ಹೆಚ್ಚು ಹರಡುವಂಥದ್ದಾಗಿದ್ದು, 85 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ.
ಅಲ್ಲದೇ ಬಡ ದೇಶಗಳಲ್ಲಿ ಲಸಿಕೆಗಳ ಕೊರತೆಯು ಡೆಲ್ಟಾ ರೂಪಾಂತರದ ಪ್ರಸರಣ ಉಲ್ಬಣಗೊಳ್ಳುತ್ತಿರುವುದಕ್ಕೆ ಕಾರಣ ಎಂದು ಹೇಳಿದ್ದಾರೆ. ಲಸಿಕೆಗಳ ಹಂಚಿಕೆಗಾಗಿ ಸ್ಥಾಪಿಸಲಾದ ಸಲಹಾ ಗುಂಪಿನ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾಹಿತಿ ನೀಡಿದ್ದಾರೆ.
‘ಹಂಚಿಕೆ ಮಾಡಲು ಲಸಿಕೆ ಇಲ್ಲದಿರುವುದು ಗುಂಪಿನ ಸದಸ್ಯರನ್ನು ಹತಾಶರನ್ನಾಗಿಸಿದೆ’ ಎಂದಿರುವ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್, ಲಸಿಕೆಯೇ ಇಲ್ಲದಿದ್ದರೆ ಏನನ್ನು ಹಂಚಿಕೆ ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತಕ್ಷಣ ಲಸಿಕೆ ನೀಡಲು ನಿರಾಕರಿಸುತ್ತಿರುವುದನ್ನು ಟೀಕಿಸಿದ್ದಾರೆ.
ದಶಕಗಳ ಹಿಂದೆ ಏಡ್ಸ್ ಮತ್ತು 2009ರಲ್ಲಿ ಹಂದಿ ಜ್ವರ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನೇ ಜಾಗತಿಕ ಸಮುದಾಯವು ಮತ್ತೆ ಮಾಡುತ್ತಿದ್ದು, ಬಿಕ್ಕಟ್ಟನ್ನು ಎದುರಿಸುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ಲಸಿಕೆ ಹಂಚಿಕೆಗೆ ವಿಶ್ವಸಂಸ್ಥೆ ಬೆಂಬಲದಲ್ಲಿ ಸ್ಥಾಪನೆಯಾಗಿರುವ ಕೊವ್ಯಾಕ್ಸ್ ಗೆ ಇನ್ನೂ ಅನೇಕ ಡೋಸ್ ಲಸಿಕೆಗಳು ದೊರೆತಿಲ್ಲ. ಈ ವರ್ಷದ ಅಂತ್ಯದ ವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ದೊರೆಯುವ ಭರವಸೆಯಿಲ್ಲ ಎನ್ನಲಾಗಿದೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 48,698 ಮಂದಿಗೆ ಸೋಂಕು
ಜುಲೈನಿಂದ ಅನ್ವಯವಾಗಲಿದೆಯೇ ಹೊಸ ವೇತನ ಸಂಹಿತೆ ?
‘ದೇಶದಲ್ಲಿ ಕೊರೋನಾ ಎರಡನೆಯ ಅಲೆ ಮುಗಿದಿಲ್ಲ’ – ‘ಡೆಲ್ಟಾ’ ಆತಂಕ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.