‘ದೇಶದಲ್ಲಿ ಕೊರೋನಾ ಎರಡನೆಯ ಅಲೆ ಮುಗಿದಿಲ್ಲ’ – ‘ಡೆಲ್ಟಾ’ ಆತಂಕ
ನವದೆಹಲಿ: ದೇಶದಲ್ಲಿ ಇನ್ನೇನು ಕೊರೋನಾ ಎರಡನೆಯ ಅಲೆ ಮುಗಿತು ಅಂತ ನಿರಾಳರಾಗ್ತಿದ್ದ ಜಜನರಿಗೆ ಒಂದೆಡೆ ಬ್ಲಾಕ್ ಫಂಗಸ್ ಕಾಟವಾದ್ರೆ ಮತ್ತೊಂದೆಡೆ, ಡೆಲ್ಟಾ ಆತಂಕ ಶುರುವಾಗಿದೆ.. ಹೌದು ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ ಎಂದು ದೇಶದ ಜನರಿಗೆ ಐಸಿಎಂಆರ್ ಮುಖ್ಯಸ್ಥ ಬಲರಾಮ ಭಾರ್ಗವ ಅವರು ಎಚ್ಚರಿಕೆ ನೀಡಿದ್ದಾರೆ. ಜನರು ಮಾಸ್ಕ್ ಧರಿಸುವ ಜೊತೆಗೆ ಮಾರ್ಗಸೂಚಿ ಪಾಲಿಸಬೇಕು. ಜನದಟ್ಟಣೆಯನ್ನು ತಡೆಯಬೇಕು ಎಂದು ಹೇಳಿದ ಅವರು, 75 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಶೇಕಡ 10 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 20 ಡೆಲ್ಟಾ ಪ್ಲಸ್ ಪ್ರಭೇದದ ಪ್ರಕರಣ ಪತ್ತೆಯಾಗಿದೆ. ದೇಶದ 10 ರಾಜ್ಯಗಳಲ್ಲಿ 48 ಡೆಲ್ಟಾಪ್ಲಸ್ ಪ್ರಕರಣಗಳು ಇವೆ. ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಡೆಲ್ಟಾಪ್ಲಸ್ ತಡೆಗೆ ಪರಿಣಾಮಕಾರಿಯೇ ಎಂಬುದರ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಗರ್ಭಿಣಿಯರಿಗೆ ಕೊರೋನಾ ಲಸಿಕೆ ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ.
H-1B ವೀಸಾ ಮರು ಅರ್ಜಿ ಸಲ್ಲಿಕೆಗೆ ಅವಕಾಶ ಕೊಟ್ಟ ಅಮೆರಿಕ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.