ಎಫ್ ಎಟಿಎಫ್ ನ ಗ್ರೇ ಪಟ್ಟಿಯಲ್ಲೇ ಮುಂದುವರೆದ ಪಾಕಿಸ್ತಾನ…!
ನವದೆಹಲಿ: ಉಗ್ರರ ನೆಲೆಯಾದ ಪಾಕಿಸ್ತಾನ ಎಫ್ ಎಟಿಎಫ್ ನ ಗ್ರೇ ಪಟ್ಟಿಯಲ್ಲೇ ಮುಂದುವರೆದಿದೆ.. ಭಯೋತ್ಪಾದಕ ಹಣಕಾಸು ವ್ಯವಸ್ಥೆ ಕುರಿತಂತೆ ಯಾವುದೇ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದ್ದರಿಂದ ಪಾಕಿಸ್ತಾನ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ‘ ಗ್ರೇ ಪಟ್ಟಿಯಲ್ಲಿ’ ಉಳಿದುಕೊಂಡಿದೆ.
ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರು ಮತ್ತು ಕಮಾಂಡರ್‌ಗಳನ್ನು ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಲು ಎಫ್‌ಎಟಿಎಫ್ ಇಸ್ಲಾಮಾಬಾದ್ ಗೆ ಸೂಚಿಸಿದೆ. ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಸೇರಿದಂತೆ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ವಿರುದ್ಧದ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದೆ.
2018 ರಲ್ಲಿ ನೀಡಲಾದ 27 ಕ್ರಿಯಾಶೀಲ ವಸ್ತುಗಳ ಪೈಕಿ 26 ಅನ್ನು ಪಾಕಿಸ್ತಾನ ಈಗ ಪೂರ್ಣಗೊಳಿಸಿದೆ. ಆದರೆ ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಫ್‌ಎಟಿಎಫ್ ಪಾಕಿಸ್ತಾನವನ್ನು ಕೇಳಿದೆ.
ವಿಶ್ವಸಂಸ್ಥೆ ಗೊತ್ತುಪಡಿಸಿರುವ ಭಯೋತ್ಪಾದಕರನ್ನು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಅಜರ್, ಲಷ್ಕರ್-ಎ-ತೈಬಾ ಸಂಸ್ಥಾಪಕ ಸಯೀದ್ ಮತ್ತು ಅದರ ‘ಕಾರ್ಯಾಚರಣಾ ಕಮಾಂಡರ್’ ಜಕಿಯೂರ್ ರೆಹಮಾನ್ ಲಖ್ವಿ ಸೇರಿದ್ದಾರೆ.








