ಇಬ್ಬನಿ ಕರಗಿದಾಗ.. ಧಾರವಾಹಿ ಭಾಗ – 2
ಒಂದು ದಿನ ಆರತಿ ರಾಮನನ್ನು ತನ್ನ ಮನೆಗೆ ಕರೆದುಕೊಂಡು ಬಂದು ಮನೆಯವರಿಗೆ ಪರಿಚಯಿಸಿ ತಾನು ಆತನನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿ ಆತನನ್ನೇ ಮದುವೆ ಆಗೋ
ನಿರ್ಧಾರ ತಿಳಿಸುತ್ತಾಳೆ. ಆದರೆ ರಾಮ್ ಆಕೆಯನ್ನು ಮದುವೆಯಾಗಲು ತಿರಸ್ಕರಿಸುತ್ತಾನೆ. ತನಗೆ ಈಗಾಗಲೇ ಬೇರೊಂದು ಹುಡುಗಿ ಜೊತೆ ಮದುವೆ ನಿಶ್ಚಿತಾರ್ಥವಾಗಿದೆ ಎಂದು ಸುಳ್ಳು ಹೇಳಿ ಅಲ್ಲಿಂದ ಹೋರಟು ಹೋಗುತ್ತಾನೆ.
ರಾಮ್ ಹೇಳಿದ್ದು ಕೇಳಿ ಆರತಿ ಶಾಕ್ ಆಗುತ್ತಾಳೆ. ಇದೇ ಸಮಯಕ್ಕೆ ಕಾಯುತ್ತಿದ್ದ ಆರತಿ ಅಕ್ಕ ರಾಮ್ ಅವಳನ್ನು ತಿರಸ್ಕರಿಸಿಲು ಅನಿತಾ ಕಾರಣ ಎಂದು ಅನಿತಾ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾಳೆ. ಮೊದಲೇ ಶಾಕ್ ನಲ್ಲಿ ಇದ್ದ ಆರತಿ ಅದನ್ನೇ ಸತ್ಯವೆಂದು ನಂಬುತ್ತಾಳೆ. ಅನಿತಾ ತನ್ನ ತಪ್ಪಿಲ್ಲ ಎಂದು ಎಷ್ಟು ಹೇಳಿದರೂ ಕೇಳಲು ತಯಾರಿರುವುದಿಲ್ಲ. ಅಣ್ಣಾ ಹೇಳುವ ಮಾತಿಗೂ ಕಿವಿ ಕೊಡದೆ ಅನಿತಾಳನ್ನು ದೂರ ತಳ್ಳಿ ಅವಳ ಬಳಿ ಶಾಶ್ವತ ವಾಗಿ ಮಾತು ಬಿಡುತ್ತಾಳೆ. ಆದರೆ ಅನಿತಾಳ ಮಕ್ಕಳ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ.

ಕಾಲ ಸರಿದಂತೆ ಅನಿತಾ ಮಕ್ಕಳಿಬ್ಬರೂ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಕೆಲಸಕ್ಕೆ ಸೇರುತ್ತಾರೆ. ಗೆಳತಿಯರಿಬ್ಬರನ್ನೂ ಒಂದುಗೂಡಿಸುವ ಅವರ ಪ್ರಯತ್ನವೂ ಫಲಿಸುವುದಿಲ್ಲ. ಆರತಿ ಅಣ್ಣನೂ ವಯೋಸಹಜ ಅನಾರೋಗ್ಯದಿಂದ ಅಸುನೀಗುತ್ತಾನೆ. ಇದರಿಂದಾಗಿ ಅನಿತಾ ಒಬ್ಬಂಟಿ ಆಗುತ್ತಾಳೆ. ಅವಳಲ್ಲಿ ಗೆಳತಿ ದೂರವಾದ ಕೊರಗು ಇದ್ದೆ ಇರುತ್ತದೆ.
ಇತ್ತ ಕಡೆ ಆರತಿ ಅಕ್ಕ ಕ್ಯಾನ್ಸರ್ ರೋಗದಿಂದ ಹಾಸಿಗೆ ಹಿಡಿಯುತ್ತಾಳೆ. ಅವಳನ್ನು ನೋಡಲು ಬಂದ ಆರತಿ ಬಳಿ ಅವಳ ಮದುವೆ ಮುರಿದು ಬೀಳಲು ರಾಮ್ ಕಾರಣ ಅನಿತಾ ಅಲ್ಲ. ಅವರಿಬ್ಬರ ಸ್ನೇಹ ಮುರಿಯಲು ತಾನು ಸುಳ್ಳು ಹೇಳಿದೆ. ಅದಕ್ಕೆ ದೇವರು ತನಗೆ ಸರಿಯಾದ ಶಿಕ್ಷೆ ಕೊಟ್ಟಿದ್ದಾನೆ ಎಂದು ಹೇಳಿ ಆರತಿ ಅಕ್ಕ ಪ್ರಾಣ ಬಿಡುತ್ತಾಳೆ. ತನ್ನ ಗೆಳತಿಯನ್ನು ತಪ್ಪು ತಿಳಿದುಕೊಂಡೆನಲ್ಲ ಎಂದು ಅನಿತಾಳ ಬಳಿ ಕ್ಷಮೆ ಕೇಳಿ ಅವರಿಬ್ಬರ ಮತ್ತೆ ಒಂದಾಗುತ್ತಾರೆ. ಒಂದು ದಿನ ಅನಿತಾ ಕೂಡ ಇಹಲೋಕ ತ್ಯಜಿಸುತ್ತಾಳೆ. ಗೆಳತಿಯನ್ನು ಕಳೆದುಕೊಂಡ ಆರತಿ ತನ್ನ ಸಮಸ್ತ ಆಸ್ತಿಯನ್ನು ಅನಿತಾ ಮಕ್ಕಳ ಹೆಸರಿಗೆ ಬರೆದು ವೃದ್ದಾಶ್ರಮ ಸೇರುತ್ತಾಳೆ.
ಇಬ್ಬನಿ ಕರಗಿದಾಗ.. ಧಾರವಾಹಿ ಭಾಗ – 1
#Ebbanikaragiddaga #serial







