ಗ್ರೀನ್ ಪಾಸ್ ಯೋಜನೆಯಡಿ ಭಾರತೀಯ ಲಸಿಕೆ ಪಡೆದವರನ್ನು ಪರಿಗಣಿಸಿ – ಯೂರೋಪ್ ರಾಷ್ಟ್ರಗಳಿಗೆ ಭಾರತದ ಮನವಿ
ನವದೆಹಲಿ: ಯುರೋಪಿಯನ್ ಒಕ್ಕೂಟವು ತನ್ನ ‘ಗ್ರೀನ್ ಪಾಸ್’ ಯೋಜನೆಯಡಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ತೆಗೆದುಕೊಂಡು ಯುರೋಪ್ ಗೆ ತೆರಳಲು ಬಯಸುವ ಭಾರತೀಯರಿಗೆ ಅವಕಾಶ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಭಾರತ 27 ರಾಷ್ಟ್ರಗಳ ಗುಂಪಿನ ಸದಸ್ಯರನ್ನು ಕೇಳಿದೆ.
ಕೋವಿನ್ ಪೋರ್ಟಲ್ ಮೂಲಕ ನೀಡಲಾದ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸ್ವೀಕರಿಸುವಂತೆ ಭಾರತವು ಇಯು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ಯುರೋಪಿಯನ್ ಯೂನಿಯನ್‌ನ ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಅಥವಾ ಗ್ರೀನ್ ಪಾಸ್ ಇಂದಿನಿಂದ ಜಾರಿಗೆ ಬರುತ್ತಿದೆ.
ಏನಿದು ಗ್ರೀನ್ ಪಾಸ್..?
ಈ ಯೋಜನೆ ಯೂರೋಪ್ ರಾಷ್ಟ್ರಗಳ ಒಕ್ಕೂಟದಿಂದ ಜಾರಿಗೆ ಬರುತ್ತಿದೆ.. ಈ ಯೋಜನೆಯಡಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯಿಂದ ಅಧಿಕೃತ ಲಸಿಕೆಗಳನ್ನು ತೆಗೆದುಕೊಂಡ ವ್ಯಕ್ತಿಗಳಿಗೆ ಯುರೋಪಿಯನ್ ಪ್ರದೇಶದೊಳಗೆ ಪ್ರವಾಸ ಪ್ರಯಾಣ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗುತ್ತದೆ.








