ಚೀನಾ ಲಸಿಕೆ ಪಡೆದ ಥಾಯ್ಲೆಂಡ್ ನ 600 ವೈದ್ಯಕೀಯ ಕಾರ್ಯಕರ್ತರಿಗೆ ಕೊರೊನಾ ಪಾಸಿಟಿವ್
ಥಾಯ್ಲೆಂಡ್ : ಚೀನಾ ತಿನ್ನೋ ಆಹಾರದಿಂದ ಹಿಡಿದು ಪ್ರತಿಯೊಂದ್ರಲಲ್ಲೂ ನಕಲಿ ತಯಾರಿಸಿ ವಿಶ್ವಾಸಕ್ಕೆ ಅರ್ಹವಲ್ಲದ ದೇಶದ ಉತ್ಪಾದನೆಗಳು ಎಂಬ ಕುಖ್ಯಾತಿ ಪಡೆದಿದೆ.. ಇಡೀ ವಿಶ್ವಾದ್ಯಂತ ಚೀನಾದ ೊಂದೇ ಒಂದು ಕ್ವಾಲಿಟಿ ಪ್ರಡಕ್ಟ್ ಅಂದ್ರೆ ಕೊರೊನಾ.. 2 ವರ್ಷಗಳಿಂದ ಚೀನಾದಿಂದ ಬಂದು ಇಡೀ ವಿಶ್ವಾದ್ಯಂತ ಕೋಟ್ಯಾಂತರ ಜನರ ಜೀವ ಪಡೆದಿದೆ ಈ ಕೊರೊನಾ ಮಹಾಮಾರಿ.. ಆದ್ರೆ ಚಿನಾದೇ ವೈರಸ್ ಆದದ್ರೂ ಆ ದೇಶದ ಲಸಿಕೆ ಮೇಲೆ ಇಡೀ ವಿಶ್ವಕ್ಕೆ ಮಾತ್ರ ಕಿಂಚಿತ್ತೂ ನಂಬಿಕೆ ಇಲ್ಲ.. ಪಾಕಿಸ್ತಾನ ಬಿಟ್ಟು.. ಪಾಕಿಸ್ತಾನ ಚೀನಾದ ಗುಲಾಮ ರಾಷ್ಟ್ರವಾಗಿಬಿಟ್ಟಿದೆ.. ಹಾಗಾಗೀ ಅದಕ್ಕೆ ಬೇರೆ ದಾರಿಯೂ ಇಲ್ಲ.. ಆದ್ರೆ ಬಹುತೇಕ ವಿಶ್ವದ ಅನೇಕ ರಾಷ್ಟ್ರಗಳು ಚೀನಾ ಲಸಿಕೆ ತೆಗೆದುಕೊಳ್ಳೋದಕ್ಕೆ ಹಿಂದೂ ಮುಂದೂ ನೋಡ್ತಾಯಿದ್ದಾರೆ..
ಈ ನಡುವೆ ಚೀನಾದ ಸಿನೊವ್ಯಾಕ್ ಲಸಿಕೆಯ ಎರಡು ಡೋಸ್ ಗಳನ್ನು ಪಡೆದ 600ಕ್ಕೂ ಹೆಚ್ಚು ವೈದ್ಯಕೀಯ ಕಾರ್ಯಕರ್ತರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಥಾಯ್ಲೆಂಡ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಹೌದು.. ಸಿನೊವ್ಯಾಕ್ ಲಸಿಕೆಯ ಎರಡು ಡೋಸ್‌ಗಳನ್ನು ಥಾಯ್ಲೆಂಡ್‌ನ 6,77,348 ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಲಾಗಿತ್ತು. ಅದರಲ್ಲಿ 618 ಜನರು ಸೋಂಕಿಗೆ ಒಳಗಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಥಾಯ್ಲೆಂಡ್‌ನ ಆರೋಗ್ಯ ಇಲಾಖೆ ನೀಡಿದೆ.
ಚೀನಾದ ‘ಸಿನೊವ್ಯಾಕ್’ ಕೋವಿಡ್–19 ಲಸಿಕೆ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಅನುಮೋದಿಸಿತ್ತು. ಈ ಲಸಿಕೆಯನ್ನು ಪಡೆದ ಮೇಲೆಯೂ ಜನರು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದು, ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಸಿನೊವ್ಯಾಕ್–ಕೊರೊನಾವ್ಯಾಕ್ ಕೋವಿಡ್–19 ಲಸಿಕೆ ಬಳಕೆ ಮಾಡಲು ಡಬ್ಲ್ಯುಎಚ್‌ಒ ಮಾನ್ಯ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಸಿನೊವ್ಯಾಕ್ ಲಸಿಕೆ ಬಳಕೆಯಲ್ಲಿದೆ. ಲಸಿಕೆಯ ಪ್ರಭಾವ, ಸುರಕ್ಷತೆ ಮತ್ತು ತಯಾರಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. 18 ವರ್ಷ ಮತ್ತು ಮೇಲ್ಪಟ್ಟವರು ಈ ಲಸಿಕೆ ಹಾಕಿಸಿಕೊಳ್ಳಲು ಶಿಫಾರಸು ಮಾಡಲಾಗಿದ್ದು, ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡು 2ರಿಂದ ನಾಲ್ಕು ವಾರಗಳ ಅಂತರದಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳುವಂತೆ ಡಬ್ಲ್ಯುಎಚ್‌ಒ ಹೇಳಿದೆ.
ಚೀನಾದ ಎರಡು ಸಿನೊಫಾರ್ಮ್ ಲಸಿಕೆಯನ್ನು ಡಬ್ಲ್ಯುಎಚ್‌ಒ ಮಾನ್ಯ ಮಾಡಿತ್ತು. ಚೀನಾ, ಚಿಲಿ, ಬ್ರೆಜಿಲ್, ಇಂಡೊನೇಷ್ಯಾ, ಮೆಕ್ಸಿಕೊ, ಥಾಯ್ಲೆಂಡ್ ಹಾಗೂ ಟರ್ಕಿ ಸೇರಿದಂತೆ 22 ರಾಷ್ಟ್ರಗಳಲ್ಲಿ ಸಿನೊವ್ಯಾಕ್ ಲಸಿಕೆ ಬಳಕೆಯಲ್ಲಿದೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..








