ಕನ್ವರ್ ಯಾತ್ರೆಗೆ ಅವಕಾಶ ನೀಡಿದ ಉತ್ತರಪ್ರದೇಶ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ: ಕೊರೊನಾ ಹಾವಳಿಯ ನಡುವೆಯೂ ಸಾವಿರಾರು ಜನ ಸೇರುವ ಕನ್ವರ್ ಯಾತ್ರೆಗೆ ಉತ್ತರಪ್ರದೇಶ ಸರ್ಕಾರ ಅನುಮತಿ ನೀಡುವ ಮೂಲಕ ಕೊರೊನಾ 3ನೇ ಅಲೆಗೆ ಖುದ್ದು ರೆಡ್ ಕಾರ್ಪೆಟ್ ಹಾಕಿ ಆಹ್ವಾನಿಸಿದೆ… ಉತ್ತರಪ್ರದೇಶ ಸರ್ಕಾರದ ಈ ನಡೆಗೆ ಭಾರೀ ಟೀಕೆಗಳು ದೇಶವ್ಯಾಪ್ತಿ ವ್ಯಕ್ತವಾಗ್ತಾಯಿದೆ. ಈ ನಡುವೆ ಕೋವಿಡ್ -19 ಆತಂಕದ ನಡುವೆವಲ್ಲೂ ಮುಂದಿನ ವಾರದಿಂದ ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೊರೊನಾ ಸಂಕಷ್ಟ – ಈ ಬಾರಿಯೂ ಕನ್ವರ್ ಯಾತ್ರೆ ರದ್ದು
ಕನ್ವರ್ ಯಾತ್ರೆಗೆ ನಿನ್ನೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಇದರಂತೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಿದೆ. ಶಿವನ ಸಾವಿರಾರು ಭಕ್ತರು ಸೇರುವ ಕನ್ವರ್ ಯಾತ್ರೆಯು ಕನಿಷ್ಠ ಸಂಖ್ಯೆಯ ಜನರೊಂದಿಗೆ ನಡೆಯಬಹುದು ಹಾಗೂ ಅಗತ್ಯವಿದ್ದರೆ ನೆಗೆಟಿವ್ ಆರ್ ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು ಎಂದು ಮಂಗಳವಾರ ಉತ್ತರಪ್ರದೇಶ ಸರ್ಕಾರರ ಹೇಳಿತ್ತು.
ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಉತ್ತರಾಖಂಡ ರಾಜ್ಯವು ತನ್ನ ಪ್ರದೇಶದಲ್ಲಿ ಕನ್ವರ್ ಯಾತ್ರೆಯನ್ನು ರದ್ದುಪಡಿಸಿತ್ತು. ದೇವರು ಕೂಡ ಜನರು ಸಾಯುವುದನ್ನು ಬಯಸುವುದಿಲ್ಲ ಎಂದಿರುವ ಉತ್ತರಾಖಂಡ ರಾಜ್ಯ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕನ್ವರ್ ಯಾತ್ರೆಯನ್ನು ರದ್ದುಪಡಿಸುವ ನಿರ್ಧಾರ ಪ್ರಕಟಿಸಿದ್ದರು. ಉತ್ತರಪ್ರದೇಶ ಹಾಗೂ ಹರಿಯಾಣದ ರಾಜ್ಯದ ಶಿವಭಕ್ತರು ಹರಿದ್ವಾರಕ್ಕೆ ಆಗಮಿಸಿ ಗಂಗಾಜಲವನ್ನು ಶ್ರಾವಣದಲ್ಲಿ ತೆಗೆದುಕೊಂಡು ಹೋಗುವುದೇ ಕನ್ವರ್ ಯಾತ್ರೆಯಾಗಿದೆ.
ಸೆಪ್ಟೆಂಬರ್ 11 ರಂದು ನೀಟ್ ಸ್ನಾತಕೋತ್ತರ ಪರೀಕ್ಷೆ
ಇಂಥ ಉತ್ಸವಗಳು ಕೋವಿಡ್ ಮೂರನೆಯ ಅಲೆ ಉಲ್ಬಣಗೊಳ್ಳಲು ಪೂರಕವಗುತ್ತವೆ ಎಂಬ ಆತಂಕ, ಅಭಿಪ್ರಾಯಗಳ ನಡುವೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಜುಲೈ 25ರಂದು ಈ ಯಾತ್ರೆ ನಡೆಸಲು ಅನುಮತಿ ನೀಡಿದೆ. ಆದರೆ, ಉತ್ತರಾಖಂಡ ಸರ್ಕಾರ ಕೊರೊನಾ ಮೂರನೆ ಅಲೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ.








