ಸಾಲ ತೀರಿಸಲು ಕಿಡ್ನಿ ಮಾರಾಟಕ್ಕೆ ಮುಂದಾಗಿ 40 ಲಕ್ಷ ಕಳೆದುಕೊಂಡ ದಂಪತಿ…!
ಹೈದ್ರಾಬಾದ್ : ಮೈ ತುಂಬಾ ಸಾಲ ಮಾಡಿಕೊಂಡು ತೀರಿಸಲಾಗದೇ ಪರದಾಡುತ್ತಿದ್ದ ದಂಪತಿ ಕಡೆಗೆ ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾಗಿದ್ದರು.. ಆದ್ರೆ 40 ಲಕ್ಷ ಕಳೆದುಕೊಂಡಿದ್ದಾರೆ.. ಇಂತಹದೊಂದು ಘಟನೆ ನಡೆದಿರೋದು ಹೈದರಬಾದ್ ನಲ್ಲಿ.
ಸ್ಟೇಷನರಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ದಂಪತಿ ವ್ಯಾಪಾರ ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದರಂತೆ. ಲಾಕ್‍ಡೌನ್ ಇದ್ದಿದ್ದರಿಂದ ಯಾವುದೇ ಆದಯ ಬರುತ್ತಿರಲಿಲ್ಲ. ಹೀಗಾಗಿ 1.5 ಲಕ್ಷ ಕೋಟಿ ಸಾಲ ಮಾಡಿ ಮನೆ ಅಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಈ ಸಾಲ ತೀರಿಸಲು ಬೇರೆ ದಾರಿ ಸಿಗದೇ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದಾರೆ. ಕಿಡ್ನಿ ಮಾರಾಟಕ್ಕಾಗಿ ಸೋಶಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ.
ಮಾರ್ಚ್ ತಿಂಗಳಲ್ಲಿ ಈ ದಂಪತಿಗೆ ಸೋಶಿಯಲ್ ಮೀಡಿಯಾನಲ್ಲಿ ವ್ಯಕ್ತಿಯೊರ್ವ ಪರಿಚಯವಾಗಿದ್ದಾನೆ. ಯುಕೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಕಿಡ್ನಿಗೆ 5ಕೋಟಿ ಕೊಟ್ಟು ಖರೀದಿಸುವುದಾಗಿ ನಕಲಿ ವೈದ್ಯ ದಂಪತಿಗೆ ನಂಬಿಸಿದ್ದಾನೆ. ಕಿಡ್ನಿ ಖರೀದಿಸುತ್ತೇನೆ ನೋಂದಾವಣಿ, ನಿರ್ವಹಣಾ ವೆಚ್ಚ, ಕರೆನ್ಸಿ ಎಕ್ಸ್ ಚೇಂಜ್ ಅಂತೆಲ್ಲ ನಂಬಿಸಿ ಸುಮಾರು 26 ಲಕ್ಷವಾಗುತ್ತದೆ ಎಂದು ದಂಪತಿ ಬಳಿಯಿಂದ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ನಂಬಿಸಿದ್ದಾನೆ.
ಕೊನೆಗೆ ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ದಂಪತಿಯನ್ನು ಭೇಟಿಯದ ಆಫ್ರಿಕಾದ ಪ್ರಜೆಯೋರ್ವ ಅವರಿಗೆ ಸೂಟ್‍ಕೇಸ್‍ನಲ್ಲಿ ಕಪ್ಪು ನೋಟುಗಳನ್ನು ತಂದರಿರುವುದನ್ನ ತೋರಿಸಿದ್ದಾನೆ. ಈ ಕಪ್ಪು ನೋಟಿಗೆ ಯಾವುದೋ ಕೆಮಿಕಲ್ ಮಿಕ್ಸ್ ಮಾಡಿ ಅದು 2 ಸಾವಿರ ರೂಪಾಯಿಯ ನೋಟಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾನೆ.
ಇದನ್ನ ನಂಬಿದ ದಂಪತಿಗೆ ಕಪ್ಪು ನೋಟ್ ಕೊಟ್ಟು ನಿಮಗೆ ಇದಕ್ಕೆ ಬೇಕಿರುವ ಕೆಮಿಕಲ್ ಕಳಿಸುತ್ತೇನೆಂದು ಹೇಳಿ ಮತ್ತೆ 14 ಲಕ್ಷ ಹಣವನ್ನ ದಂಪತಿಯಿಂದ ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾನೆ. ಹೀಗೆ ಬರೋಬ್ಬರಿ 40 ಲಕ್ಷ ಹಣ ಕಳೆದುಕೊಂಡು ಮೋಸ ಹೋದ ದಂಪತಿ ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
World Snake Day: ಇವುಗಳ ವಿಷಕ್ಕೆ ಪವರ್ ಹೆಚ್ಚು.. Most Dangerous ಹಾವುಗಳ ಡಿಟೈಲ್ಸ್
ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ : VIDEO VIRAL