ಮುಂಬೈನಲ್ಲಿ ಇನ್ನೂ ಶಾಂತನಾಗಿಲ್ಲ ‘ವರುಣ’ – ಭಾರೀ ಮಳೆ ಮುನ್ಸೂಚನೆ : ರೆಡ್ ಅಲರ್ಟ್ ಘೋಷಣೆ..!
ಮಾಯಾನಗರಿ ಮುಂಬೈನಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗ್ತಲೇ ಇದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ಮಳೆಯಿಂದ ಅಲ್ಲಲ್ಲಿ ಸಂಭವಿಸಿದ ದುರಂತಗಳಲ್ಲಿ 20 ಕ್ಕೂ ಹೆಚ್ಚು ಜೀವಗಳು ಹೋಗಿವೆ.. ರಸ್ತೆಗಳು ಕರೆಯಂತಾಗಿ , ಕಾರುಗಳು ನೀರಲ್ಲಿ ಕೊಚ್ಚಿ ಹೋಗಿ , ಮನೆಗಳು ಮುಳುಗಡೆಯಾಗಿದ್ದಂತಹ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರ ೆದೆಬಡಿತ ಹೆಚ್ಚಿಸಿದ್ದವು..
ಈ ನಡುವೆ ಮಾಯಾನಗರಿಯಲ್ಲಿ ಇಷ್ಟಕ್ಕೆ ವರುಣ ಶಾಂತನಾಗಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.. ಅಲ್ಲದೇ ಪ್ರಾದೇಶಿಕ ಹವಾಮಾನ ಕೇಂದ್ರ ಬುಧವಾರ ವಾಣಿಜ್ಯ ನಗರಿ ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಿಸಿದೆ.ಇದಕ್ಕೂ ಮುನ್ನ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿತ್ತು, ಆದರೆ. ಭಾರಿ ಮಳೆಗೆ ಪೂರಕ ವಾತಾವರಣ ಉಂಟಾದ ಕಾರಣ ಈಗ ‘ರೆಡ್ ಅಲರ್ಟ್‘ ಘೋಷಿಸಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ. ಜಯಂತ್ ಸರ್ಕಾರ್ ತಿಳಿಸಿದ್ದಾರೆ.








