ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿಲ್ಲ ಎಂದ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ..!

1 min read
Priyanka Gandhi

ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿಲ್ಲ ಎಂದ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ..!

ಕೊರೊನಾ 2ನೇ ಅಲೆ ವೇಳೆ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿಲ್ಲ ಎಂಬ ಕೇಂದ್ರದ ಹೇಳಿಕೆ ವಿರುದ್ಧ  ಕಾಂಗ್ರೆಸ್ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಕಿಡಿಕಾರಿದ್ದಾರೆ..

“ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆಮ್ಲಜನಕದ ತ್ವರಿತ ಸಾಗಣೆ ಹಾಗೂ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿಲ್ಲ. ಇದರಿಂದಾಗಿಯೇ ಸಾವುಗಳು ಸಂಭವಿಸಿದವು” ಕಟುವಾಗಿ  ಟೀಕಿಸಿದ್ದಾರೆ.

ಕೇಂದ್ರವು ಕೋವಿಡ್‌ನ 2ನೇ ಅಲೆ ವೇಳೆ, ಆಮ್ಲಜನಕದ ಕೊರತೆಯಿಂದಾಗಿ ಸಾವು ಸಂಭವಿಸಿದ ಬಗ್ಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳು ವರದಿ ಮಾಡಿಲ್ಲ ಎಂದು ರಾಜ್ಯಸಭೆಯಲ್ಲಿ  ಪ್ರತಿಪಾದಿಸಿದೆ.. ಇದರ ವಿರುದ್ಧ ವಿಪಕ್ಷ ನಾಯಕರು ಕಿಡಿಕಾರುತ್ತಾ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಅದ್ರಂತೆ ಪ್ರಿಯಾಂಕಾ ಗಾಂಧಿ ಸಹ ಕಿಡಿಕಾರಿದ್ದು, ಸಂಸದೀಯ ಸಮಿತಿ ಹಾಗೂ ಉನ್ನತಾಧಿಕಾರ ಸಮಿತಿ ನೀಡಿದ್ದ ಸಲಹೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿತು. ಆಮ್ಲಜನಕದ ಸಮರ್ಪಕ ಪೂರೈಕೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.

ಬಿಎಸ್‍ವೈ “ಚಮಚ” ಆಗಲಿಲ್ಲ ಎಂದು ಬದಲಾವಣೆ ಪ್ರಯತ್ನ : ಬಿಎಸ್ ವೈ ಪರ ಸುಬ್ರಮಣಿಯನ್ ಬ್ಯಾಟ್

ಮಿಸ್ಡ್ ಕಾಲ್ ನಿಂದ ಪ್ರೇಮಾಂಕುರ : ಯುವತಿಗೆ ಸಿಕ್ಕ `ವಿಶೇಷಚೇತನ’

ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ:  ತಾಯಿಯನ್ನ ನೆನೆದು ಭಾವುಕರಾದ ಸೋನು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd