ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ:  ತಾಯಿಯನ್ನ ನೆನೆದು ಭಾವುಕರಾದ ಸೋನು

1 min read

ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ:  ತಾಯಿಯನ್ನ ನೆನೆದು ಭಾವುಕರಾದ ಸೋನು

ಮುಂಬೈ :  ಕೊರೊನಾ ಹಾವಳಿಯಿಂದ ಮೊದಲ ಬಾರಿಗೆ ಲಾಕ್ ಡೌನ್ ಜಾರಿಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಬಡವರು , ವಿದ್ಯಾರ್ತೀಗಳು , ಕೊರೊನಾ ಸೋಂಕಿತರು , ವಲಸೆ ಕಾರ್ಮಿಕರು , ಒಟ್ನಲ್ಲಿ ನೆರವಿನ ನಿರೀಕ್ಷೆಯಲ್ಲಿ ಯಾರೇ ಬಂದ್ರೂ ಸಹ ಜಾಗ ಯಾವುದೇ ಇದ್ರು ಜನ ಯಾರೇ ಇದ್ರು , ಬಡವ ಶ್ರೀಮಂತ ಅಂತ ನೋಡದೇ ಸಹಾಯ ಮಾಡುತ್ತಾ ಜನರ ಪಾಲಿನ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರಿಗೆ ಜನರು ಮನಸ್ಸಲ್ಲಿ ಜಾಗ ಕೊಟ್ಟಿದ್ದಾರೆ.. ಅನೇಕರು ಸೋನು ಅವರನ್ನ ಆರಾಧಿಸುತ್ತಿದ್ದಾರೆ.   ಆದ್ರೆ ಸೋನು ತಮ್ಮ ಮನಸ್ಸಿಗೆ   ತೀರಾ ಹತ್ತಿರವಾಗಿದ್ದವರನ್ನ ಜೀವನದಲ್ಲಿ ತುಂಬಾನೆ ಮುಖ್ಯವಾಗಿದ್ದ ವ್ಯಕ್ತಿ ಅಂದ್ರೆ ತಮ್ಮ ತಾಯಿಯನ್ನ ನೆನೆದು ಬಾವುಕರಾಗಿ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ಪ್ರತಿ ವರ್ಷ ನಿಮ್ಮನ್ನು ತಬ್ಬಿಕೊಂಡು ನೇರವಾಗಿ ವಿಶ್ ಮಾಡುವಂತಿರಬೇಕಿತ್ತು ಎಂದು ಬಯಸುತ್ತೇನೆ. ಬದುಕಿನ ಪಾಠಗಳನ್ನು ಕಲಿಸಿದ್ದಕ್ಕೆ ಧನ್ಯವಾದ ಅರ್ಪಿಸಬೇಕು ಎಂದು ಬಯಸುತ್ತೇನೆ. ನನ್ನ ಕೆಲಸವನ್ನು ನಾನು ಉತ್ತಮವಾಗಿ ಮಾಡಿ, ನಿಮಗೆ ಹೆಮ್ಮೆ ತರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ನಾನು ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಈ ಮೆಸೇಜ್‍ಗಳಿಂದ ತಿಳಿಸಲು ಸಾಧ್ಯವೇ ಇಲ್ಲ.

ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ. ನಾನು ನಿಮ್ಮನ್ನು ಮತ್ತೆ ಭೇಟಿ ಆಗುವವರೆಗೂ ಆ ಖಾಲಿತನ ತುಂಬಲು ಸಾಧ್ಯವಿಲ್ಲ. ನೀವು ಎಲ್ಲೇ ಇದ್ದರೂ ಖುಷಿ ಆಗಿರಿ. ನನಗೆ ಮಾರ್ಗದರ್ಶನ ನೀಡುತ್ತಿರಿ. ಲವ್ ಯೂ ಅಮ್ಮ ಎಂದು ಸೋನು ಸೂದ್ ಭಾವನಾತ್ಮಕವಾಗಿ ಇನ್‍ಸ್ಟಾಗ್ರಾಮ್‍ ನಲ್ಲಿ ಬರೆದುಕೊಂಡು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸೋನು ಪೋಸ್ಟ್ ಗೆ ನೆಟ್ಟಿಗರ ಕಣ್ಣುಗಳು ಒದ್ದೆಯಾಗಿವೆ.. ಸಿನಿಮಾಗಳಲ್ಲಿ ವಿಲ್ಲನ್ ಆಗಿ ಆ ಪಾತ್ರಗಳಿಗೆ ಜೀವ ತುಂಬುವ “ ಪಶುಪತಿ” ರಿಯಲ್ ಲೈಫ್ ನಲ್ಲಿ ಬಡವರ ಪಾಲಿನ ರಿಯಲ್ ಹೀರೋ ಅನ್ನೋದನ್ನ ಸಾಬೀತು ಪಡಿಸಿದ್ದಾರೆ ಸೋನು..

“ಥೀಯೇಟರ್ ಗಳಲ್ಲಿ 100 %ಅವಕಾಶ ಸಿಗಲಿ ಮೊದಲು ಬರೋದು ನಾವೇ”..! ಸಲಗ ರಿಲೀಸ್ ಡೇಟ್ ಬಹಿರಂಗ..!  

“ಸೆಕ್ಸ್ ರಾಕೆಟ್ ನ ಮಾಸ್ಟರ್ ಮೈಂಡ್ ಈ ರಾಜ್ ಕುಂದ್ರ”  – ಮಾದಕ ನಟಿ ಪೂನಂ

“ ರಾಜ್‌ ಕುಂದ್ರಾ ನನಗೆ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಕೇಳಿದ್ದರು, ಈತ ಜೈಲಿನಲ್ಲಿಯೇ ಕೊಳೆಯಲಿ ” – ಯೂಟ್ಯೂಬ್ ಸ್ಟಾರ್

ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಭಜರಂಗಿ-2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ – ಅಧಿಕೃತ ಘೋಷಣೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd