ಭಾರಿ ಮಳೆಯಿಂದಾಗಿ ಉಕ್ಕಿದ ವೇದಗಂಗಾ : ರಾಷ್ಟ್ರೀಯ ಹೆದ್ದಾರಿ ಬಂದ್ heavy rain
ಬೆಳಗಾವಿ : ಜಿಲ್ಲೆಯಲ್ಲಿ ಭಾರಿ ಮಳೆಯಾಗಿರುತ್ತಿರುವ ಪರಿಣಾಮ ವೇದಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿನ್ನು ಬಂದ್ ಮಾಡಲಾಗಿದೆ.
ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಯಮಗರಣಿ ಬಳಿ ಪೊಲೀಸರು ಬ್ಯಾರಿಕೇಡ್ಗಳನ್ನು ಇಟ್ಟು ರಸ್ತೆ ಬಂದ್ ಮಾಡಿದ್ದಾರೆ. ಅಲ್ಲದೆ ವಾಹನಗಳ ಮಾರ್ಗ ಬದಲಿಸುವಂತೆ ಸೂಚಿಸುತ್ತಿದ್ದಾರೆ.
ಬೆಂಗಳೂರು, ತುಮಕೂರು, ದಾವಣಗೆರೆ, ಧಾರವಾಡ, ಹಾವೇರಿ ಮೊದಲಾದ ಕಡೆಗಳಿಂದ ಮಹಾರಾಷ್ಟ್ರ ಮತ್ತು ಉತ್ತರ ಭಾರತಕ್ಕೆ ತೆರಳುವ ವಾಹನಗಳು ಈ ಮಾರ್ಗದಲ್ಲಿ ಬರಬಾರದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಈ ಮಾರ್ಗ ಬಳಸದೇ ಹೊಸಪೇಟೆ-ವಿಜಯಪುರ, ಹುಬ್ಬಳ್ಳಿ- ವಿಜಯಪುರ ಮಾರ್ಗದಲ್ಲಿ ಸಂಚರಿಸುವಂತೆ ಎಸ್ ಪಿ ಅವರು ಸಲಹೆ ನೀಡಿದ್ದಾರೆ.










