“ರಿಸಲ್ಟ್ ಬಂದಾಯ್ತು ಅಲ್ವಾ” : ಸಿ.ಪಿ.ಯೋಗೇಶ್ವರ್
ಚಿಕ್ಕಬಳ್ಳಾಪುರ : ಜುಲೈ 26ಕ್ಕೆ ಮುಖ್ಯಮಂತ್ರಿ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಸ್ವತಃ ಸಿಎಂ ಬಿ.ಎಸ್.ಯಡಿಯೂರಪ್ಪನವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡ ಖಚಿತಪಡಿಸಿದ್ದಾರೆ.
ಈ ಮಧ್ಯೆ ಸಿಎಂ ಬದಲಾವಣೆ ಬಗ್ಗೆ ಕಳೆದ ಕೆಲ ತಿಂಗಳಿನಿಂದ ಹೇಳುತ್ತಲೇ ಬಂದು ಸ್ವಪಕ್ಷೀಯರ ಕೆಂಗಣ್ಣಿ ಗುರಿಯಾಗಿದ್ದ ಸಚಿವ ಸಿ.ಪಿ.ಯೋಗೇಶ್ವರ್, ನಾವು ಪರೀಕ್ಷೆ ಪಾಸ್ ಆಗಿದ್ದೇವೆ. ರಿಸಲ್ಟ್ ಬಂದಾಯ್ತು ಅಲ್ವಾ ಎಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ. ಯೋಗೀಶ್ವರ್, ನಾವು ಪರೀಕ್ಷೆ ಪಾಸ್ ಆಗಿದ್ದೇವೆ. ರಿಸಲ್ಟ್ ಬಂದಾಯ್ತು ಅಲ್ವಾ? ಎಂದು ಸಿಎಂ ಬದಲಾವಣೆ ವಿಚಾರವಾಗಿ ಹೇಳಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಹತ್ತಿರ ಹೋಗಿ ಕೆಲಸ ಮಾಡಿಸಿಕೊಳ್ಳುತ್ತಾರೆ. ನಂತರ ಯಡಿಯೂರಪ್ಪನವರನ್ನು ಕುಮಾರಸ್ವಾಮಿ ದೂಷಣೆ ಮಾಡುತ್ತಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೂರ ಇಡಬೇಕು ಎಂದು ನಾನು ಹೇಳುತ್ತಿದ್ದೆ. ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು, ನಂಬಬಾರದು ಎಂದು ಹೇಳುತ್ತಿದ್ದೆ ಎಂದು ತಿಳಿಸಿದ್ದಾರೆ.










