ಬಿಎಸ್‍ವೈ ರೈಲ್ವೆ ಇಂಜಿನ್, ನಾವು ಬೋಗಿಗಳು : ಎಸ್.ಎ.ರಾಮದಾಸ್
ಮೈಸೂರು : ಯಡಿಯೂರಪ್ಪ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿದ್ದಾರೆ. ನಾನು ಯಡಿಯೂರಪ್ಪ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಬಿಎಸ್‍ವೈ ರೈಲ್ವೆ ಇಂಜಿನ್, ನಾವು ಬೋಗಿಗಳ ರೀತಿ ಅವರನ್ನ ಅನುಸರಿಸುತ್ತೇವೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ. ಅವರಿಗೆ ನಾನಾಗಲಿ, ಮಠಾಧೀಶರಾಗಲಿ ಬೆಂಬಲ, ಕೊಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ.
ನಾನು ಯಡಿಯೂರಪ್ಪ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಯಡಿಯೂರಪ್ಪ ನನ್ನ ತಂದೆಯ ಸಮಾನರು, ನಿರಂತರವಾಗಿ ನನ್ನನ್ನು ಯುವಮೋರ್ಚಾ ಅಧ್ಯಕ್ಷನನ್ನಾಗಿಸಿ ನನ್ನನ್ನು ಬೆಳೆಸಿದವರು. ಬಿಎಸ್‍ವೈ ರೈಲ್ವೆ ಇಂಜಿನ್, ನಾವು ಬೋಗಿಗಳ ರೀತಿ ಅವರನ್ನ ಅನುಸರಿಸುತ್ತೇವೆ ಎಂದರು.
ಇನ್ನು ರಾಜಕಾರಣ ನಡೆಯುತ್ತೆ ಹೋಗುತ್ತೆ, ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೇಲೆ ಗಮನಹರಿಸುತ್ತಿದ್ದೇನೆ. ನಾನು ಬೆಂಗಳೂರಿಗೂ ಹೋಗಿಲ್ಲ, ದೆಹಲಿಗೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.









