ಕ್ಯಾಪ್ಸಿಕಂ ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1ಕಪ್
ಸಾಸಿವೆ – 1ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಅರಿಸಿನ ಪುಡಿ – ಚಿಟಿಕೆಯಷ್ಟು
ಕಡ್ಲೇಕಾಯಿ ಬೀಜ – 1/2 ಚಮಚ
ಗೋಡಂಬಿ – 2 ಚಮಚ
ಸಣ್ಣ ಈರುಳ್ಳಿ – 1
ಕ್ಯಾಪ್ಸಿಕಂ – 1
ತೆಂಗಿನ ಕಾಯಿತುರಿ – ಸ್ವಲ್ಪ
ಹಸಿಮೆಣಸಿನಕಾಯಿ -5
ನಿಂಬೆರಸ – 1ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಮೊದಲಿಗೆ ಅಕ್ಕಿ ತೊಳೆದು ಅನ್ನವನ್ನು ಮಾಡಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕರಿಬೇವಿನ ಸೊಪ್ಪು ಅರಿಸಿನ ಪುಡಿ ಕಡ್ಲೇಕಾಯಿ ಬೀಜ, ಗೋಡಂಬಿ ಸೇರಿಸಿ ಹುರಿಯಿರಿ. ನಂತರ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ಬಳಿಕ ಕತ್ತರಿಸಿದ ದೊಣ್ಣೆ ಮೆಣಸು ಸೇರಿಸಿ ಬಾಡಿಸಿ. ಅದು ಬೆಂದ ಬಳಿಕ ಅನ್ನ, ನಿಂಬೆರಸ ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ತೆಂಗಿನಕಾಯಿತುರಿ, ಕೊತ್ತಂಬರಿ ಸೊಪ್ಪು ಉದುರಿಸಿ.ಹಸಿಮೆಣಸು ಸೀಳಿ ಹಾಕಿ. ರುಚಿಯಾದ ಕ್ಯಾಪ್ಸಿಕಂ ಚಿತ್ರಾನ್ನ ಸವಿಯಲು ಸಿದ್ಧ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಟಿಸಿಎಸ್ – 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧಾರ#TCSHiring #News https://t.co/N40liGM5XZ
— Saaksha TV (@SaakshaTv) July 24, 2021
ತವಾ ಪಲಾವ್#Saakshatv #cookingrecipe #tavapulav https://t.co/MTv29AgXLe
— Saaksha TV (@SaakshaTv) July 24, 2021
ನೈಸರ್ಗಿಕ ವಿಧಾನಗಳಿಂದ ಮಧುಮೇಹ ಸಮಸ್ಯೆ ನಿಯಂತ್ರಣದಲ್ಲಿಡುವುದು ಹೇಗೆ?#Saakshatv #healthtips https://t.co/VX1HEEamRT
— Saaksha TV (@SaakshaTv) July 24, 2021
ಬಾಳೆಕಾಯಿ ಮಸಾಲಾ ಪರೋಟ#Saakshatvcookingrecipe https://t.co/qLse8WK2n1
— Saaksha TV (@SaakshaTv) July 13, 2021
#Saakshatv #cookingrecipe #capsicumchitranna








