ಸಲಾರ್ ಗೆ ಬಾಲಿವುಡ್ ನ ‘ಕಮಲಿ’ ಎಂಟ್ರಿ..!
ಕಿಂಗ್ ಮೇಕರ್ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ಬಹುನಿರೀಕ್ಷೆಯ ಸಿನಿಮಾ ಸಲಾರ್ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿದೆ.. ಈ ನಡುವೆ ಈ ಸಿನಿಮಾಗೆ ಬಾಲಿವುಡ್ ನ ಗ್ಲಾಮರಸ್ ಗೊಂಬೆ ಎಂಟ್ರಿಕೊಡ್ತಿರೋದಾಗಿ ಚರ್ಚೆಯಾಗ್ತಿದೆ..
ಹೌದು.. ಈ ಸಿನಿಮಾಗೆ ಕತ್ರೀನಾ ಕೈಫ್ ಎಂಟ್ರಿ ಕೊಡ್ತಾಯಿದ್ದಾರೆ ಎನ್ನಲಾಗ್ತಾಯಿದೆ.. ಈ ಮೊದಲು ಕತ್ರಿನಾ ಕೈಫ್ ಸಲಾರ್ ಚಿತ್ರಕ್ಕೆ ನಾಯಕಿ ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ, ಸಲಾರ್‌ಗೆ ಹೀರೋಯಿನ್ ಆಗಿ ಶ್ರುತಿ ಹಾಸನ್ ಎಂಟ್ರಿಯಾಗಿತ್ತು. ಈಗ ಮತ್ತೊಮ್ಮೆ ಕತ್ರೀನಾ ಸುದ್ದಿಯಾಗಿದ್ದಾರೆ.. ಈ ಸಿನಿಮಾದ ಐಟಂ ಸಾಂಗ್ ನಲ್ಲಿ ಕತ್ರೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..
ಈಗಾಗಲೇ ಸಲಾರ್ ಸಿನಿಮಾದ ಎರಡನೇ ಹಂತದ ಶೂಟಿಂಗ್ ಆರಂಭವಾಗಿದೆ.. ಸಲಾರ್ ಹೈದರಾಬಾದ್‌ನಲ್ಲಿ ಎರಡನೇ ಹಂತದ ಶೂಟಿಂಗ್‌ಗೆ ಚಿತ್ರತಂಡ ಚಾಲನೆ ಕೊಟ್ಟಿದೆ. ಸಾಹಸ ದೃಶ್ಯಗಳ ಶೂಟಿಂಗ್ ನಡೆಯುತ್ತಿದ್ದು, ಸಾಹಸ ನಿರ್ದೇಶಕ ಅನ್ಬು-ಅರಿವ್ ಪಾಲ್ಗೊಂಡಿದ್ದಾರೆ. ತಡರಾತ್ರಿವರೆಗೂ ಸಲಾರ್ ಚಿತ್ರೀಕರಣ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರುತಿ ಹಾಸನ್ ನಾಯಕಿ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದ ಶ್ರುತಿ ಹಾಸನ್, ಈಗ ಎರಡನೇ ಶೆಡ್ಯೂಲ್‌ನಲ್ಲೂ ಭಾಗಿಯಾಗಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಹೊಂಬಾಳೆ ಫಿಲಂಸ್ ಸಂಸ್ಥೆ ಬಂಡವಾಳ ಹೂಡ್ತಿದೆ. ವರದಿಗಳ ಪ್ರಕಾರ, ಸಲಾರ್ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ನಟ ಮಧು ಗುರುಸ್ವಾಮಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಚಿತ್ರತಂಡದ ಯೋಜನೆಯಂತೆ ಶೂಟಿಂಗ್ ಮುಗಿದರೆ 2022ರ ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲಿದೆ.ಪ್ಯಾನ್ ಇಂಡಿಯಾ
ಸದ್ಯ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬದ್ಯುಸಿಯಾಗಿದ್ದಾರೆ.. ಅವರ ಬಹುನಿರೀಕ್ಷೆಯ ಪ್ರಾಜೆಕ್ಟ್ ಗಳಲ್ಲಿ ಆದಿಪುರುಷ್ ಕೂಡ ಒಂದು.. ಮತ್ತೊಂದೆಡೆ ಈಗಾಗಲೇ ಅವರು ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ರಾಧೆಶ್ಯಾಮ್ ಚಿತ್ರೀಕರಣ ಮುಗಿದು ರಿಲೀಸ್ ಗೆ ರೆಡಿಯಾಗಿದೆ.. ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬರ್ತಿದೆ. ಇತ್ತೀಚಿಗಷ್ಟೆ ಬಿಡುಗಡೆ ದಿನಾಂಕ ಅಧಿಕೃತಗೊಳಿಸಲಾಗಿದ್ದು, ಜನವರಿ 14, 2022ಕ್ಕೆ ರಾಧೆಶ್ಯಾಮ್ ವರ್ಲ್ಡ್‌ವೈಡ್ ತೆರೆಗೆ ಬರೋದು ಖಚಿತವಾಗಿದೆ.. .








