ಟೋಕಿಯೊ ಒಲಂಪಿಕ್ಸ್ | 41 ವರ್ಷಗಳ ಬಳಿಕ ಭಾರತಕ್ಕೆ ಪದಕ
ಜಪಾನ್ : ಕೊನೆಗೂ ಶತಕೋಟಿಯ ಭಾರತೀಯರ ಕನಸು ನನಸಾಗಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದುಕೊಂಡಿದೆ.
ನಿನ್ನೆ ಸೆಮಿಫೈನಲ್ ಸೋಲು ಕಂಡಿದ್ದ ಭಾರತ ತಂಡ, ಇಂದಿನ ಪಂದ್ಯದಲ್ಲಿ ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಸ್ಮರಣೀಯ ಗೆಲುವು ದಾಖಲಿಸಿ ಸಂಭ್ರಮಿಸಿದೆ.
ಇಂದಿನ ಪಂದ್ಯ ಆರಂಭವಾಗುತ್ತಿದ್ದಂತೆ ಜರ್ಮನಿಯ ತೈಮೂರ್ ಒರುಜ್ ಮೊದಲ ಗೋಲು ಬಾರಿಸಿ ಭಾರತೀಯರ ಮೇಲೆ ಒತ್ತಡ ಹೇರಿದರು. ಅಲ್ಲದೆ ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡರು.

ಇದರಿಂದ ಚೇತರಿಸಿಕೊಂಡ ಭಾರತೀಯರು ಎರಡನೇ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಸಂದಿಗ್ಧ ಸಂದರ್ಭದಲ್ಲಿ ಭಾರತದ ಸಿಮ್ರಂಜಿತ್ ಸಿಂಗ್ ಗೋಲು ಬಾರಿಸಿದ್ದು ಕೋಟ್ಯಂತರ ಭಾರತೀಯರ ಮೊಗದಲ್ಲಿ ನಗು ಅರಳಿಸಿತು.
ಮೂರನೇ ಸುತ್ತಿನಲ್ಲಿ ಭಾರತದ ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಂಜಿತ್ ಸಿಂಗ್ ಬಾರಿಸಿದ ಎರಡು ಗೋಲುಗಳು ತಂಡವನ್ನು 5-3 ಅಂತರದಿಂದ ಗೆಲುವಿನ ಅಂಚಿಗೆ ಕರೆಯ್ದದವು.
ಅಂತಿಮವಾಗಿ ಭಾರತ ತಂಡ 5-4 ಅಂತರದೊಂದಿಗೆ ಪಂದ್ಯದಲ್ಲಿ ಗೆಲುವು ಸಾಧಿಸಿತು. ಆ ಮೂಲಕ ಬರೋಬ್ಬರಿ 49 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಕಂಚಿಗೆ ಮುತ್ತಿಕ್ಕಿದೆ.








