ಅಲಾಸ್ಕಾದ ಪರ್ವತ ಪ್ರದೇಶದಲ್ಲಿ ವಿಮಾನ ಪತನ – ಪೈಲಟ್ ಸೇರಿ 6 ಮಂದಿ ಸಾವು
ಅಲಾಸ್ಕಾದ ಆಗ್ನೇಯ ಭಾಗದ ಪರ್ವತ ಪ್ರದೇಶದಲ್ಲಿ ವಿಮಾನ ಪತಗೊಂಡು , ಪೈಲೆಟ್ ಸೇರಿದಂತೆ 6 ಮಂದಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.. ಹಾಲೆಂಡ್ ಅಮೆರಿಕ ಲೈನ್ ಹಡಗಿನ ಐವರು ಪ್ರಯಾಣಿಕರನ್ನು ಡಿ ಹಾವಿಲ್‌ಲ್ಯಾಂಡ್ ಬಿವೇರ್ ವಿಮಾನದ ಮೂಲಕ ಕೆಟ್ಚಿಕನ್‌ನ ಬಂದರು ನಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಿಮಾನವು ಅಪಘಾತಕ್ಕೀಡಾಗಿದೆ.
ದುರಂತದಲ್ಲಿ ಯಾರೂ ಕೂಡ ಬದುಕ್ಕುಳಿದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಮೆರಿಕದ ಕರಾವಳಿ ಪಡೆ, ಅರಣ್ಯ ಸೇವೆ ಸೇರಿದಂತೆ ಇತರೆ ಸಂಸ್ಥೆಗಳು ಶೋಧ ಕಾರ್ಯಾಚರಣೆ ನಡೆಸಿ, ವಿಮಾನದ ಅವಶೇಷಗಳು ಮತ್ತು ಮೃತದೇಹಗಳು ಪತ್ತೆ ಹಚ್ಚಿವೆ ಎಂದು ಅಲಾಸ್ಕಾ ಸ್ಟೇಟ್ ಟ್ರೂಪರ್ಸ್ ಹೇಳಿಕೆಯಲ್ಲಿ ತಿಳಿಸಿದೆ.








