ವಿಜಯಪುರ : ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವ vijayapura saaksha tv
ವಿಜಯಪುರ : ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದಲ್ಲಿ ನವ ವಿವಾಹಿತೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅರುಣಾ ಶರಣು ಕೆಂಭಾವಿ (22) ಎಂಬುವರು ಮೃತರಾಗಿದ್ದು, ಅರುಣಾ ಪತಿ ಶರಣು ಕೆಂಭಾವಿ ಸಹೋದರಿ ಶೈಲಾ ಎಂಬುವರ ವಿರುದ್ಧ ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದ್ನೂರು ಗ್ರಾಮದ ಅರುಣಾಗೆ ಶರಣು ಜೊತೆ ವಿವಾಹವಾಗಿತ್ತು.
ಆದ್ರೆ, ಮದುವೆಯಾಗಿ ಸಹೋದರನ ಮನೆಯಲ್ಲಿಯೇ ಇರುವ ಶೈಲಾ ಅರುಣಾಳಿಗೆ ಕಿರುಕುಳ ನೀಡುತ್ತಿದ್ದಳಂತೆ. ಇದರಿಂದ ನೊಂದ ನವವಿವಾಹಿತೆ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.









