ಭಜರಂಗಿ 2 ಸಿನಿಮಾದ ಹಿಂದಿ ರೈಟ್ಸ್ }ಪಭಾರೀ ಮೊತ್ತಕ್ಕೆ ಸೇಲ್..!
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನಿಮಾದ ಹಿಂದಿಯ ಡಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಏಲ್ ಆಗಿದೆ ಎನ್ನಲಾಗ್ತಿದೆ.. ಭಜರಂಗಿ-2 ಸಿನಿಮಾದ ಡಬ್ಬಿಂಗ್ ರೈಟ್ಸ್ ಬರೋಬ್ಬರಿ 5.5 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವರಾಜ್ ಕುಮಾರ್ ನಟನೆಯ ಸಿನಿಮಾ ಹಿಂದಿ ಡಬ್ಬಿಂಗ್ ಇಷ್ಟು ದೊಡ್ಡ ಮಟ್ಟದಲ್ಲಿ ಮಾರಾಟವಾಗಿರುವು ಇದೇ ಮೊದಲು. ಜಯಣ್ಣ-ಬೋಗೇಂದ್ರ ನಿರ್ಮಾಣದಲ್ಲಿ ಭಜರಂಗಿ-2 ಸಿನಿಮಾ ಮೂಡಿಬಂದಿದೆ. 2013ರಲ್ಲಿ ಬಂದ ಭಜರಂಗಿ ಸಿನಿಮಾದ ಪಾರ್ಟ್-2 ಆಗಿದೆ. ಪಾರ್ಟ್ ಒಂದರಲ್ಲಿ ಶಿವರಾಜ್ ಕುಮಾರ್ ಜೊತೆ ನಟಿ ಐಂದ್ರಿತಾ ರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಇದೀಗ ಶಿವಣ್ಣ ಜೊತೆ ಭಾವನಾ ಮೆನನ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಭಜರಂಗಿ-2 ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗ ಗೊಳಿಸಿದೆ. ‘ಭಜರಂಗಿ-2’ ಸಿನಿಮಾ ‘ಸೆಪ್ಟಂಬರ್ 10’ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಗಣೇಶ ಚತುರ್ಥಿ ದಿನವೇ ಭಜರಂಗಿ-2 ಸಿನಿಮಾ ಬಿಡುಗಡೆಯಾಗುತ್ತಿದೆ. ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಭಜರಂಗಿ ಮತ್ತು ವಜ್ರಕಾಯ ಸಿನಿಮಾ ಬಳಿಕ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಇದಾದ ನಂತರ ಮತ್ತೆ ಇದೇ ಕಾಂಬಿನೇಷನ್ ನಲ್ಲಿ ವೇದ ಸಿನಿಮಾ ಮೂಡಿಬರಲಿದ್ದುಉ, ಈಗಾಗಲೇ ಪೋಸ್ಟರ್ ನಿಂದಲೇ ಸಖತ್ ಸೌಂಡ್ ಮಾಡಿದೆ.









