ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ
ಟೀಮ್ ಇಂಡಿಯಾ ವಿರುದ್ದ ಎರಡನೇ ಪಂದ್ಯದಲ್ಲಿ ಸೋತಿರುವ ಇಂಗ್ಲೆಂಡ್ ತಂಡ ಇದೀಗ ಮೂರನೇ ಟೆಸ್ಟ್ ಪಂದ್ಯದತ್ತ ಚಿತ್ತವನ್ನಿಟ್ಟಿದೆ.
ಎರಡನೇ ಟೆಸ್ಟ್ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲು ಇಂಗ್ಲೆಂಡ್ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದೆ. ಡೇವಿಡ್ ಮಲಾನ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿದೆ. ಮೂರು ವರ್ಷಗಳ ಬಳಿಕ ಡೇವಿಡ್ ಮಲಾನ್ ಅವರು ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಗೇ ಆರಂಭಿಕರಾದ ಡಾಮ್ ಸಿಬ್ಲೆ ಮತ್ತು ಝಾಕ್ ಕ್ರಾವ್ಲೇ ಅವರನ್ನು ತಂಡದಿಂದ ಕೈಬಿಡಲಾಗಿದೆ. ಫಾರ್ಮ್ ಕಂಡುಕೊಳ್ಳಲು ಡಾಮ್ ಸಿಬ್ಲೆ ಅವರು ಕೆಂಟ್ ತಂಡ ಮತ್ತು ಝಾಕ್ ಕ್ರಾವ್ಲೆ ವಾವ್ರಿಕ್ ಶೈರ್ ತಂಡದಲ್ಲಿ ಆಡುವಂತೆ ಇಸಿಬಿ ತಿಳಿಸಿದೆ.
ಇನ್ನೊಂದೆಡೆ ಯುವ ವೇಗಿ ಸಕೀಬ್ ಮಹ್ಮುದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25ರಿಂದ ಆರಂಭವಾಗಲಿದೆ. ಇನ್ನೊಂದೆಡೆ ಟೀಮ್ ಇಂಡಿಯಾದ 11ರ ಬಳಗದಲ್ಲಿ ಒಂದೆರಡು ಬದಲಾವಣೆಯಾಗುವ ಸಾಧ್ಯತೆಗಳಿವೆ. ಮುಖ್ಯವಾಗಿ ಚೇತೇಶ್ವರ ಪೂಜಾರ ಸ್ಥಾನ ಅಲುಗಾಡುತ್ತಿದೆ.
ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ
ಜಾಯ್ ರೂಟ್ (ನಾಯಕ), ಮೋಯಿನ್ ಆಲಿ, ಜೇಮ್ಸ್ ಆಂಡರ್ಸನ್, ಜೋನಾಥನ್ ಬೇರ್ ಸ್ಟೋವ್, ರೋರಿ ಬನ್ರ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಸಕೀಬ್ ಮಹ್ಮುದ್, ಡೇವಿಡ್ ಮಲಾನ್, ಕ್ರೇಗ್ ಒವರ್ಟನ್, ಒಲಿಯ್ ಪೊಪೆ, ಒಲಿಯ್ ರಾಬಿನ್ಸನ್, ಮಾರ್ಕ್ ವುಡ್.








