ಮಗಳಿಗೆ ಕಿರುಕುಳ ಕೊಟ್ಟವನ ವಿರುದ್ಧ ದೂರು ನೀಡಿದ ಮಹಿಳೆಗೆ ಬೆಂಕಿಯಿಟ್ಟ ಪೋಷಕರು
ಉತ್ತರಪ್ರದೇಶ : ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ಮನುಕುಲ ತಲೆ ತಗ್ಗಿಸುವಂತಹ ಮತ್ತೊಂದು ಹೇಯ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರು ಭಯದಲ್ಲಿ ಬದುಕುವಂತಾಗಿದೆ.. ದಿನಬೆಳಗಾದ್ರೆ , ಮಕ್ಕಳು ಅಪ್ರಾಪ್ತರು , ಮಹಿಳೆಯರು , ವಿವಾಹಿತರು , ವೃದ್ಧೆಯರ ಮೇಲೂ ಕಾಮ ಪಿಸಾಚಿಗಳು ಅಟ್ಟಹಾಸ ಮೆರೆಯುತ್ತಾ ಇದ್ದಾರೆ.. ಆದ್ರೂ ಇಂತಹ ಪ್ರಕರಣಗಳು ಮಾತ್ರ ಕಡಿಮೆಯಾಗದೇ ದಿನೇ ದಿನೇ ಹೆಚ್ಚಾಗ್ತಲೇ ಇರೋದು ಅಲ್ಲಿನ ಕಾನೂನು ವ್ಯವಸ್ಥೆ ಯಾವ ರೀತಿ ಇರಬಹುದು ಎಂಬುದನ್ನ ತೋರಿಸುತ್ತೆ. ಯೋಗಿ ರಾಜ್ಯದಲ್ಲಿ ಇದೀಗ ಮತ್ತೊಂದು ನಾಚಿಕೆಗೇಡು ಎನಿಸುವಂತಹ ಘಟನೆ ಬೆಳಕಿಗೆ ಬಂದಿದೆ..
ಮಹಿಳೆಯೊಬ್ಬಳು ತನ್ನ ಮಗಳಿಗೆ ನಿಮ್ಮ ಮಗ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆ ವ್ಯಕ್ತಿಯ ತಂದೆ ತಾಯಿಯ ಬಳಿ ದೂರಿದ್ದಾಳೆ.. ತನ್ನ ಮಗನ ಮೇಲೆ ಈ ರೀತಿಯಾದ ಆರೋಪ ಮಾಡಿದ್ದಕ್ಕೆ ಆರೋಪಿಯ ತಂದೆ ತಾಯಿ ಸೇರಿ ಮಹಿಳೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದೇ ಬಿಟ್ಟಿದ್ದಾರೆ.. ಘಟನೆ ವೇಳೆ ಗಂಭೀರವಾಗಿ ಅಸ್ವಸ್ಥರಾದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿ ಮತ್ತು ಆತನ ತಾಯಿಯನ್ನು ಬಂಧಿಸಿದ್ದಾರೆ. ತಂದೆ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








