ಅಫ್ಗಾನ್ ನಲ್ಲಿ ಷರಿಯಾ ಕಾನೂನು – ಏನಿದು..? ಷರಿಯಾ ಕಾನೂನು ಮಹಿಳೆಯರು ಹೆದರುತ್ತಿರುವುದು ಯಾಕೆ..? ಏನಿದರ ನಿಯಮಗಳು..?
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡಿದ್ದಾರೆ ತಾಲೀಬಾನ್ ರಾಕ್ಷಸರು.. ಅಲ್ಲಿನ ಜನರು ಅದ್ರಲ್ಲೂ ಮಹಿಳೆಯರಿಗೆ ಅಕ್ಷರಸಹ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನಿಗಳು ರಕ್ತಪಾತದ ಮೇಲೆಯೇ ಗೋರಿಕಟ್ಟುವಂತೆ ಸರ್ಕಾರ ಕಟ್ಟಲು ಹೊರಟಿದ್ದಾರೆ.. ಆದ್ರೆ ಇದರ ನಡುವೆ ಅಫ್ಗಾನ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರೋದಿಲ್ಲ.. ಬಬದಲಾಗಿ ಷರಿಯಾ ಕಾನೂನು ಜಾರಿಯಾಗೋದಾಗಿ ಘೋಷಣೆ ಮಾಡಿದೆ.
ಇದ್ರಿಂದಾಗಿ ಹೆಚ್ಚ ಆತಂಕಕ್ಕೆ ಒಳಗಾಗಿರೋದು ಮಹಿಳೆಯರು.. ತಾಲಿಬಾನ್ ಮುಖಂಡ ವಹಿದುಲ್ಲಾ ಹಶೆಮಿ ಈ ಬಗ್ಗೆ ಮಾತನಾಡಿದ್ದು, ಅಫ್ಗಾನಿಸ್ತಾನದಲ್ಲಿ ಪ್ರಜಾಪ್ರುಭುತ್ವ ವ್ಯವಸ್ಥೆ ಇರೋದಿಲ್ಲ. ಇದಕ್ಕೆ ಇಲ್ಲಿ ನೆಲೆ ಇಲ್ಲ ಎಂದು ಹೇಳಿದ್ದಾನೆ. ಅಲ್ಲದೇ ತನ್ನದೇ ಆದ ಸೇನೆಯನ್ನ ಸರ್ಕಾರವು ಸ್ಥಾಪಿಸಲಿದೆ ಎಂದಿದ್ದಾನೆ.. ಮುಖ್ಯವಾಗಿ ತಾಲೀಬಾನಿಗಳು ನಾವು ಮಹಿಳೆಯರ ಹಕ್ಕುಗಳನ್ನ ಗೌರವಿಸುತ್ತೇವೆ ಎಂದಿದ್ರು.. ಆದ್ರೆ ಇದೀಗ ಮಹಿಳೆಯರ ಎಲ್ಲಾ ಹಕ್ಕುಗಳನ್ನ ಕಸಿಯಲು ಹೊರಟಿದ್ದಾರೆ..
ಏನಿದು..? ಷರಿಯಾ ಕಾನೂನು ಮಹಿಳೆಯರು ಹೆದರುತ್ತಿರುವುದು ಯಾಕೆ..?
ಮೊದಲನೇಯದ್ದಾಗಿ ಈ ಕಾನೂನಿನ ಅಡಿ ಮಹಿಳೆಯರು ಗೃಹಬಂಧನದಲ್ಲಿ ಇರಬೇಕಾಗುತ್ತದೆ.
ಹಿಂದಿನ ಆಳ್ವಿಕೆಯ ಕಾನೂನು
ಈ ಹಿಂದೆ ತಾಲಿಬಾನ್ ಆಳ್ವಿಕೆಯಲ್ಲಿ, ಮಹಿಳೆಯರಿಗೆ ಕೆಲಸ ಮಾಡಲು ಅಥವಾ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ.
ಎಂಟು ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಮಹಿಳೆ ಬುರ್ಖಾ ಧರಿಸಬೇಕು. ಮನೆಯಿಂದ ಹೊರಹೋಗಲು ಬಯಸಿದರೆ ಯಾರಾದರೂ ಒಬ್ಬ ಪುರುಷ ಸಂಬಂಧಿಯೊಂದಿಗೇ ಮನೆಯಿಂದ ಹೊರಗಡೆ ಕಾಲಿಡಬೇಕು. ಯಾವುದೇ ಮಹಿಳೆಯು ಹೈ ಹೀಲ್ಸ್ ಧರಿಸುವಂತಿಲ್ಲ, ಅವರ ಹೆಜ್ಜೆಯ ಶಬ್ಧ ಪುರುಷರಿಗೆ ಕೇಳುವಂತಿಲ್ಲ. ಸಾರ್ವಜನಿಕವಾಗಿ ಜೋರಾಗಿ ಮಾತನಾಡಬಾರದು. ಮಹಿಳೆಯ ಧ್ವನಿ ಅಪರಿಚಿತ ವ್ಯಕ್ತಿಗಳಿಗೆ ಕೇಳಿಸಬಾರದು. 
ಪತ್ರಿಕೆಗಳು, ಪುಸ್ತಕಗಳು, ಅಂಗಡಿಗಳು ಅಥವಾ ಮನೆಯಲ್ಲಿ ಮಹಿಳೆಯರ ಚಿತ್ರಗಳನ್ನು ತೆಗೆಯುವುದು, ಚಿತ್ರೀಕರಿಸುವುದು ಅಥವಾ ಪ್ರದರ್ಶಿಸುವುದನ್ನ ನಿಷೇಧಿಸುತ್ತದೆ.
ಮಹಿಳೆಯರು ತಮ್ಮ ಬಾಲ್ಕನಿಯಲ್ಲಿ ಕಾಣಿಸಿಕೊಳ್ಳಲು ಅವಕಾಶವಿರಲ್ಲ.
“ಮಹಿಳೆಯರು” ಎಂಬ ಪದವನ್ನು ಯಾವುದೇ ಸ್ಥಳದ ಹೆಸರುಗಳಿಂದ ತೆಗೆದುಹಾಕಬೇಕು.
ತಾಲಿಬಾನ್‌ನ ಹಿಂದಿನ ಆಡಳಿತದ ಸಮಯದಲ್ಲಿ, ನಿಯಮಗಳನ್ನು ಉಲ್ಲಂಘಿಸಿದ ಮಹಿಳೆಯರ ಮೇಲೆ ಸಾರ್ವನಜಿಕವಾಗಿ ಹಲ್ಲೆ ನಡೆಸುವುದು , ಕಲ್ಲೆಸೆಯುವುದು , ಅಲ್ಲದೇ ಅತೀರೇಖಕ್ಕೆ ಹೋದಾಗ ಸಾರ್ವಜನಿಕವಾಗಿ ಮರಣದಂಡನೆನ್ನೂ ವಿಧಿಸಿ , ಅವಮಾನ ಮಾಡಲಾಗುತ್ತದೆ..
ಈಗ ತಾಲೀಬಾನಿಗಳ ಆಳ್ವಿಕೆಯಲ್ಲಿ ಯಾವ ಬದಲಾವಣೆಗಳಾಗಬಹುದು…?
ತಾಲೀಬಾನಿಗಳು ನಾವು ಬದಲಾಗಿದ್ದೇವೆ ಅಂತ ಹೇಳಿಕೊಂಡಿದ್ರು ಅವರ ಕ್ರೌರ್ಯದ ಅರಿವು ಎಲ್ರಿಗೂ ಇದೆ.
ತಾಲೀಬಾನಿಗಳು ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಮತ್ತು ಅವರ ವಿರುದ್ಧ ಹೋರಾಡಿದವರನ್ನು ಕ್ಷಮಿಸುವ ಭರವಸೆ ನೀಡಿದ್ದಾರೆ.
ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಈ ಬಗ್ಗೆ ಮಾತನಾಡಿದ್ದು, ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಮತ್ತು ವಿಶ್ವವಿದ್ಯಾಲಯದ ಹಂತದವರೆಗೆ ಶಿಕ್ಷಣ ಪಡೆಯುವ ಹಕ್ಕನ್ನು ನೀಡುವುದಾಗಿ ಘೋಷಣೆ ಮಾಡಿದ್ದಾನೆ.
ಆದ್ರೆ ಜನರು ತಾಲೀಬಾನಿಗಳನ್ನ ಅವರು ಹೇಳುತ್ತಿರುವ ಮಾತುಗಳನ್ನ ನಂಬಿಲ್ಲ.
ಷರಿಯಾ ಎಂದ್ರೆ..?
ಅರೇಬಿಕ್ ನಲ್ಲಿ ಷರಿಯಾ ಎಂದ್ರೆ “ದಾರಿ” ಎಂದರ್ಥ. ಇದು ಕಾನೂನಿನ ಯಾವುದೇ ಭಾಗವನ್ನೂ ಉಲ್ಲೇಖಿಸುವುದಿಲ್ಲ. ಇದು ಕುರಾನ್ ನಲ್ಲಿನ ನೈತಿಕ ಅಂಶಗಳು , ನೈತಿಕ ತತ್ವಗಳನ್ನ ಆಧರಿಸಿದ್ದಾಗಿದೆ. ಮಾರಲ್ ಎತಿಕ್ಸ್ ಹಾಗೂ ಮೊಹಮ್ಮದ್ ( ದೇವದೂತ) ಅವರ ಹೇಳಿಕೆಗಳು ಮತ್ತು ಅವರ ಆಚರಣೆಗಳನ್ನ ಆಧರಿಸಿದೆ. ಇದು ಇಜ್ಮಾ, ಮುಸ್ಲಿಂ ವಿದ್ವಾಂಸರ ಒಮ್ಮತ, ಮತ್ತು ಕಿಯಾಸ್, ಸಾದೃಶ್ಯದ ಮೂಲಕ ತಾರ್ಕಿಕತೆಯನ್ನು ಪಡೆಯುತ್ತದೆ. ಎಲ್ಲಾ ಕ್ರಿಯೆಗಳನ್ನು ಕಡ್ಡಾಯ, ಶಿಫಾರಸು, ಅನುಮತಿ ಅಥವಾ ಇಷ್ಟವಿಲ್ಲ ಎಂದು ವರ್ಗೀಕರಿಸಲಾಗಿದೆ.
ಪ್ರಾರ್ಥನೆ, ಉಪವಾಸ ಮತ್ತು ಬಡವರಿಗೆ ದೇಣಿಗೆ ಸೇರಿದಂತೆ ಎಲ್ಲಾ ಮುಸ್ಲಿಮರು ಪಾಲಿಸಬೇಕಾದ ಜೀವನ ಸಂಹಿತೆಯಾಗಿ ಶರಿಯಾ ಕಾರ್ಯನಿರ್ವಹಿಸುತ್ತದೆ. ಇದು ಮುಸ್ಲಿಮರು ದೇವರ ಇಚ್ಛೆಯಂತೆ ತಮ್ಮ ಜೀವನದ ಪ್ರತಿಯೊಂದು ಅಂಶವನ್ನು ಹೇಗೆ ನಡೆಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಶರಿಯಾ ಒಂದು ಶಾಸನಗಳ ಪುಸ್ತಕವಲ್ಲ ಅಥವಾ ಸರ್ಕಾರವು ವಿಧಿಸಿದ ನ್ಯಾಯಾಂಗ ಪೂರ್ವನಿದರ್ಶನವಲ್ಲ, ಮತ್ತು ಇದು ನ್ಯಾಯಾಲಯದಲ್ಲಿ ತೀರ್ಮಾನಿಸಲ್ಪಟ್ಟ ನಿಯಮಾವಳಿಗಳ ಗುಂಪಲ್ಲ. ಆದ್ರೆ ಇದು ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. ಅಲ್ಲದೇ ಕೆಲ ಮೂಲಗಳ ಪ್ರಕಾರ ಈ ಕಾನೂನಿನ ಅಡಿ ಎಲ್ಲಾ ರೀತಿಯಾದ ಮನರಂಜನೆಗಳಿಂದ ಜನರು ವಂಚಿತರಾಗಲಿದ್ದಾರೆ.. ಸಂಗೀತ , ಟಿವಿ , ವಿಡಿಯೋಗಳನ್ನ ಬ್ಯಾನ್ ಮಾಡಲಾಗುವುದು.. ಜೊತೆಗೆ ಗಡ್ಡ ಕತ್ತರಿಸುವುದು , ದಿನಕ್ಕೆ 5 ಬಾರಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ವಿಫಲರಾದ ಪುರುಷರ ಮೇಲೆ ಹಲ್ಲೆ ಮಾಡುವುದು ಒಳಗೊಂಡಿದೆ.. 
ಷರಿಯಾವನ್ನು ವಿವಿಧ ಹಂತಗಳಲ್ಲಿ ಮತ್ತು ಆಚರಣೆಯಲ್ಲಿ ಹೆಚ್ಚಿನ ವೈವಿಧ್ಯತೆಯೊಂದಿಗೆ ಅನ್ವಯಿಸಲಾಗಿದೆ – ಪ್ರತ್ಯೇಕ ಮುಸ್ಲಿಮರು ಮತ್ತು ಪ್ರಧಾನವಾಗಿ ಮುಸ್ಲಿಂ ದೇಶಗಳು. ಸೌದಿ ಅರೇಬಿಯಾ, ಕತಾರ್ ಮತ್ತು ಇರಾನ್ ನಂತಹ ದೇಶಗಳು ಇದನ್ನು ಅನುಸರಿಸುತ್ತಿವೆ.
ಅಫ್ಗಾನ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲ್ಲ – ಷರಿಯಾ ಕಾನೂನು ಜಾರಿ..!
ಪಶ್ಚಿಮ ಬಂಗಾಳ : ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಹೈ ಕೋರ್ಟ್ ಆದೇಶ








