ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ : ರೇಣುಕಾಚಾರ್ಯ
ದಾವಣಗೆರೆ : ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ ಎಂದು ಹೇಳುವ ಮೂಲಕ ಶಾಸಕ ಎಂ ಪಿ ರೇಣುಕಾಚಾರ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ದಾವಣಗೆರೆಯಲ್ಲಿ ತಿರುಗೇಟು ನೀಡಿದ ರೇಣುಕಾಚಾರ್ಯ, ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ. ನಮ್ಮ ಸರ್ಕಾರ ನೆಲಮಟ್ಟಕ್ಕಿಳಿಯುತ್ತದೆ. ಜನರಿಗೆ ಅಗತ್ಯ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುತ್ತದೆ. 2 ವರ್ಷ ಸಿಎಂ ಆಗಿದ್ದ ಯಡಿಯೂರಪ್ಪ ಸ್ವಯಂ ಪ್ರೇರಿತರಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ರು. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು, ಇನ್ನೂ 18 ತಿಂಗಳು ಬೊಮ್ಮಾಯಿ ಉತ್ತಮ ಆಡಳಿತ ನೀಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರು.
ಮುಂದುವರೆದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, 2013-18 ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಬಿಜೆಪಿ ತಪ್ಪಿನಿಂದಾಗಿ, ಆಗ ಬಿಜೆಪಿ, ಬಿಎಸ್‍ಆರ್, ಕೆಜೆಪಿ, ಮೂರು ಗುಂಪಾಗಿತ್ತು. ನಮ್ಮ ತಪ್ಪಿನಿಂದ ಅವರು ಅಧಿಕಾರಕ್ಕೆ ಬಂದ್ರು ಎಂದರು.
ಅಲ್ಲದೆ ಸಮ್ಮಿಶ್ರ ಸರ್ಕಾರದ ಬಗ್ಗೆ ಟೀಕೆ ಮಾಡಿದ ರೇಣುಕಾಚಾರ್ಯ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು, ಮಾಜಿ ಪ್ರಧಾನಿ ದೇವೇಗೌಡ್ರ ಮನೆಗೆ ತೆರಳಿ ಮಂಡಿ ಊರಿ ಕುಮಾರಸ್ವಾಮಿಯವನ್ನು ಸಿಎಂ ಮಾಡಿದ್ರು. ಅಂದು ಸಿದ್ದರಾಮಯ್ಯನವರಿಗೆ ಭ್ರಮನಿರಸನವಾಗಿತ್ತು. ಆದ್ರೂ ಜೆಡಿಎಸ್, ಕಾಂಗ್ರೆಸ್ ಒಳಜಗಳದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋ ಕನಸು ಕಾಣುತ್ತಿದ್ದರು. ಇದರಿಂದ ಬೇಸತ್ತ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದರು.ಇದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ವಿವರಿಸಿದರು.









