ನರರಾಕ್ಷಸ ತಾಲಿಬಾನಿಗಳ ಹುಟ್ಟಡಗಿಸಿದ ಪಂಜಶೀರ್ ಹೋರಾಟಗಾರರು -300 ತಾಲಿಬಾನಿಗಳು ಫಿನಿಷ್..!
ಇಡೀ ಅಫ್ಗಾನಿಸ್ತಾನವನ್ನೇ ವಶಕ್ಕೆ ಮಕ್ಕಳು ಮಹಿಳೆಯರ ಜೀವನ ನರಕ ಮಾಡಿ ಸಿಕ್ಕಸಿಕ್ಕವರನ್ನ ಕೊಂದು ಹೆಣಗಳ ರಾಶಿ ಮೇಲೆ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್ ನರರಾಕ್ಷಸರು ಒಂದೇ ಒಂದು ಪ್ರದೇಶದ ಜನರನ್ನ ಕಂಡ್ರೆ ಕನಸಲ್ಲಿಯೂ ಬೆಚ್ಚಿ ಬೀಳ್ತಾರೆ.. 33 ಪ್ರಾಂತ್ಯಗಳನ್ನ ವಶಪಡಿಸಿಕೊಂಡಿರುವ ತಾಲಿಬಾನಿಗಳ ಕೈಲಿ ಅದೊಂದು ಪ್ರದೇಶವನ್ನ ಟಚ್ ಮಾಡೋದಕ್ಕೂ ಆಗದಂತಾಗಿದೆ.. ಇನ್ನೂ ಆ ಪ್ರದೇಶದ ಜನರ ತಂಟೆಗೆ ಹೋದ ಪರಿಣಾಮ 300 ತಾಲಿಬಾನಿ ಉಗ್ರರ ಕಥೆ ಮುಗಿದಿದೆ..
ಪಂಜಶೀರ್ ದತ್ತ ಪ್ರಯಾಣ ಬೆಳೆಸಿದ್ದ ಸುಮಾರು 300 ತಾಲಿಬಾನಿಗಳನ್ನು ಅಲ್ಲಿನ ಹೋರಾಟಗಾರರು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.. ಆದ್ರೆ ತಾಲಿಬಾನಿಗರು ಸೋಲೊಪ್ಪಿಲ್ಲ.. ಇನ್ನೂ ಹೆಚ್ಚು ಹೆಚ್ಚು ಹಿಂದು ಪಂಜಶೀರ್ ದತ್ತ ಪ್ರಯಾಣ ಬೆಳೆಸಿದೆ ಎನ್ನಲಾಗಿದೆ. ಪಂಜಶೀರ್ ದ ಹುಲಿ ಎಂದು ಕರೆಸಿಕೊಳ್ಳುವ ಅಹಮದ್ ಶಾ ಮಸೂದ್ ಪುತ್ರ 32 ವರ್ಷದ ಅಹಮದ್ ಶಾ, ನಮ್ಮ ಪ್ರಾಂತ್ಯವನ್ನು ತಾಲಿಬಾನಿಗಳಿಗೆ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ.
ಭಾನುವಾರ ಅಲ್-ಅರೇಬಿಯಾ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅಹಮದ್ ಮಸೂದ್, ನಾವು ಯುದ್ಧ ಮಾಡಲ್ಲ. ಆದ್ರೆ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ. ಒಂದು ವೇಳೆ ತಾಲಿಬಾನಿಗಳ ವರ್ತನೆ ಅತಿರೇಕಕ್ಕೆ ತಲುಪಿದ್ರೆ ಯುದ್ಧ ನಡೆಯುವುದೇ ಇಲ್ಲ ಎಂದು ಹೇಳಲಾರೆ. ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ತಾಲಿಬಾನಿಗಳ ಮಾತುಕತೆ ಅವಶ್ಯಕವಾಗಿದೆ. ತಾಲಿಬಾನಿಗಳು ಮಾತುಕತೆಗೆ ಒಪ್ಪದಿದ್ರೆ ಯುದ್ಧ ನಮ್ಮ ಮುಂದಿನ ಆಯ್ಕೆ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಂಜಶೀರ್ ನ ಜನರು ಒಗ್ಗಟ್ಟಾಗಿದ್ದು ದೇಶವನ್ನು ರಕ್ಷಿಸುವ ಗುರಿ ಹೊಂದಿದ್ದಾರೆ. ವಿಸ್ತೀರ್ಣದಲ್ಲಿ ಪಂಜಶೀರ್ ಚಿಕ್ಕ ಪ್ರಾಂತ್ಯವಾಗಿರಬಹುದು. ಆದ್ರೆ ಇಲ್ಲಿರುವ ಎಲ್ಲರೂ ದೇಶದ ಜನರ ಶಾಂತಿಗಾಗಿ ಹೋರಾಡಲು ಸಿದ್ಧರಾಗಿದ್ದಾರೆ ಎಂದು ಅಹಮದ್ ಮಸೂದ್ ಹೇಳಿದ್ದಾರೆ. ಸದ್ಯ ಪಂಜಶೀರ್ ನಲ್ಲಿ 10 ಸಾವಿರಕ್ಕೂ ಅಧಿಕ ಸೈನಿಕರಿದ್ದಾರೆ. ತಾಲಿಬಾನಿಗಳ ವಿರುದ್ಧದ ಹೋರಾಟಕ್ಕೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಮರೂಲ್ಲಾಹ ಸಾಲೇಹ ಮತ್ತು ಅಫ್ಘಾನಿಸ್ತಾನದ ವಾರ್ ಬೋರ್ಡ್ ಎಂದು ಕರೆಸಿಕೊಳ್ಳುವ ಜನರಲ್ ಅಬ್ದುಲ್ ರಶೀದ್ ಸಹ ಪಂಜಶೀರ್ ನಲ್ಲಿರುವ ಜನತೆಗೆ ಬೆಂಬಲ ನೀಡಿದ್ದಾರೆ. ಇದರ ಜೊತೆ ಅಶ್ರಫ್ ಘನಿ ಸರ್ಕಾರದ ರಕ್ಷಣಾ ಸಚಿವ ಜನರಲ್ ಬಿಸ್ಮಿಲ್ಲಾಹ ಮೊಹಮ್ಮದಿ ಸಹ ತಾವು ಪಂಜಶೀರ್ ನೊಂದಿಗೆ ಇರೋದಾಗಿ ಘೋಷಣೆ ಮಾಡಿದ್ದಾರೆ.