‘ನರಕ’ದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ 107 ಭಾರತೀಯರು..!
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಭಾರತ ಅಲ್ಲಿ ಸಿಲುಕಿರುವ ಬಾರತೀಯರು ಹಿಂದೂಗಳು , ಸಿಖ್ಖರನ್ನು ಸುರಕ್ಷಿತವಾಗಿ ಬಾರತಕ್ಕೆ ಕರೆ ತರುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇದೀಗ ನರಕ ( ತಾಲೀಬಾನ್ ಗಳು ಅಟ್ಟಹಾಸದಿಂದ ನರಕವಾಗಗಿರುವ ಅಫ್ಗಾನ್ ) ದಿಂದ 107 ಭಾರತೀಯರು ಸೇರಿದಂತೆ ಒಟ್ಟು 168 ಮಂದಿಯನ್ನು ಸುರಕ್ಷಿತವಾಗಿ ಬಾರತಕ್ಕೆ ಕರೆತಂದಿದೆ.
ಅಫ್ಗಾನಿಸ್ತಾನದ ಕಾಬೂಲ್ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ಭಾನುವಾರ 168 ಮಂದಿಯನ್ನು ದೇಶಕ್ಕೆ ಕರೆತರಲಾಗಿದೆ. ಇದರಲ್ಲಿ 107 ಮಂದಿ ಭಾರತೀಯರಿದ್ದಾರೆ. ಇಬ್ಬರು ನೇಪಾಳಿ ಪ್ರಜೆಗಳು ಸೇರಿದಂತೆ ಇನ್ನೂ 87 ಮಂದಿಯನ್ನು ತಜಕಿಸ್ತಾನದ ದುಶಾಂಬೆ ಮೂಲಕ ಈಗಾಗಲೇ ನವದೆಹಲಿಗೆ ಕರೆಸಿಕೊಳ್ಳಲಾಗಿದೆ. ಕಳೆದ ಕೆಲವು ದಿನಗಳಲ್ಲಿ 135 ಮಂದಿ ಭಾರತೀಯರನ್ನು ಅಮೆರಿಕ ಮತ್ತು ನ್ಯಾಟೊ ಪಡೆಗಳ ವಿಮಾನದ ಮೂಲಕ ಅಫ್ಗಾನಿಸ್ತಾನದಿಂದ ತೆರವುಗೊಳಿಸಲಾಗಿದೆ.
ಕಾಬೂಲ್ನಿಂದ ದೋಹಾಕ್ಕೆ ಕರೆದೊಯ್ಯಲಾಗಿರುವ ಭಾರತೀಯರು ಅಫ್ಗಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. 107 ಭಾರತೀಯರು ಸೇರಿದಂತೆ 168 ಮಂದಿಯನ್ನೊಳಗೊಂಡ ವಾಯುಪಡೆ ವಿಮಾನ ಕಾಬೂಲ್ನಿಂದ ದೆಹಲಿಗೆ ಬರುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಅರಿಂದಂ ಬಾಗ್ಚಿ ಹೇಳಿದ್ದಾರೆ.








