ವಿಜಯಪುರ: 2 ವರ್ಷದ ಮಗುವೊಂದು ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಲಚ್ಚಾಣ ಎಂಬ ಗ್ರಾಮದಲ್ಲಿ ನಡೆದಿದೆ. ಸಾತ್ವಿಕ್ ಮುಜಗೊಂಡ (2) ಕೊಳವೆ ಬಾವಿಗೆ ಬಿದ್ದ ದುರ್ದೈವ ಮಗು. ಸತೀಶ ಮುಜಗೊಂಡ, ಪೂಜಾ ಎಂಬ ದಂಪತಿಯ ಮಗ ಬಿದ್ದಿದ್ದಾನೆ. ಸತೀಶ ಅವರ 4 ಎಕರೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಲಾಗಿತ್ತು. ಆದರೆ ಕೊಳವೆ ಬಾವಿ ಮುಚ್ಚಿರುವ ಕೆಲಸ ಮಾಡಿರಲಿಲ್ಲ. ಮಗು ಆಟವಾಡಲು ಹೋಗಿದ್ದಾಗ ಕೊಳವೆ ಬಾವಿಗೆ ಬಿದ್ದಿದೆ ಎನ್ನಲಾಗಿದೆ.
ಕಬ್ಬು, ಲಿಂಬೆಗೆ ನೀರಿಲ್ಲ ಎಂದು ಬೋರ್ ಹೊಡೆಸಲಾಗಿತ್ತು. 400 ಅಡಿ ವರೆಗೂ ಬಾವಿ ಕೊರೆಸಲಾಗಿತ್ತು. ಸದ್ಯ ಮಗುವಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ.