ಉಡುಪಿ: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಪತ್ನಿ ಈಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ (Kollur Mookambika Temple) ಭೇಟಿ ನೀಡಿ ದೇವಿಯ ದರ್ಶನ ಮಾಡಿದ್ದಾರೆ.
ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ಆಪ್ತರ ಜೊತೆ ದೇವಸ್ಥಾನಕ್ಕೆ ಬಂದಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿಗೆ ರಾತ್ರಿ ಆಗಮಿಸಿದ ಅವರು ದೇವಿಯ ದರ್ಶನ ಪಡೆದು, ಪತಿಯನ್ನು ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದ್ದಾರೆ.
ದೇವಸ್ಥಾನದಲ್ಲಿ ಗುರುವಾರ ನವ ಚಂಡಿಕಾ ಹೋಮ (Nava Chandika Homa) ನಡೆಯಲಿದೆ. ಮುಂಜಾನೆ ಯಾಗಶಾಲೆಯಲ್ಲಿ ಚಂಡಿಕಾಹೋಮ ನಡೆಯಲಿದ್ದು ದರ್ಶನ್ ಬಂಧಮುಕ್ತಿಗಾಗಿ ವಿಜಯಲಕ್ಷ್ಮಿ ಪ್ರಾರ್ಥಿಸಲಿದ್ದಾರೆ.








