ಆನ್ಲೈನ್ ಗೇಮ್ ವ್ಯಸನಕ್ಕೆ ಸಹೋದರನನ್ನೆ ಕೊಂದ ಬಾಲಕ….
ಫ್ರೀ ಫೈರ್ ಪಬ್‌ಜಿ ಡ್ರಾಗನ್ ಸ್ಕ್ವಾಡ್ ನಂತಹ ಆನ್ಲೈನ್ ಗೇಮ್ ಗಳಿಗೆ ವ್ಯಸನಿಯಾಗಿದ್ದ ಬಾಲಕನೊಬ್ಬ ತನ್ನ ಸಹೋದರ ಸಂಬಂಧಿಯನ್ನು ಕೊಂದು ಹೂತು ಹಾಕಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.. ಬಾಲಕನನ್ನು ರಾಜಸ್ಥಾನದ ಲಡ್ನು ಪೊಲೀಸ್ ಪೊಲೀಸರು ಬಂಧಿಸಿದ್ದಾರೆ.
ತನ್ನ ಸಹೋದರನ ಕೊಲೆ ಮಾಡಿದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಫೇಕ್ ಐಡಿ ಸೃಷ್ಟಿ ಮಾಡಿ … ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ಐದು ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದ ಎಂದು ನಗೌರ್ ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಸಿಂಗ್ ತಿಳಿಸಿದ್ದಾರೆ.
ಆನ್ಲೈನ್ ಗೇಮ್ ಗಳ ಟೋಕನ್ ಪೇಮೆಂಟ್ ವಿಚಾರವಾಗಿ ಇಬ್ಬರ ನಡುವೆ ಹೊಲದಲ್ಲಿ ಜಗಳ ಉಂಟಾಗಿದೆ. ಬಾಲಕನನ್ನು ಆಪಾದಿತ ಕತ್ತು ಹಿಸುಕಿ ಸಾಯಿಸಿದ್ದಾನೆ. ಸಿಕ್ಕಿ ಬೀಳುವ ಭಯದಲ್ಲಿ ಬಾಲಕನ ದೇಹವನ್ನು ಮಣ್ಣಿನಲ್ಲಿ ಹೂಳಿದ್ದಾನೆ.
ಲಡ್ನು ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 9ರಂದು ದೂರು ದಾಖಲಿಸಲಾಗಿದ್ದು, 12 ವರ್ಷದ ಬಾಲಕ, ಡಿಸೆಂಬರ್ 8ರಂದು ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಮನೆಯಿಂದ ಹೋದವನು ಮರಳಿ ಬರಲೇ ಇಲ್ಲ ಎಂದು ಕಂಪ್ಲೆಂಟ್ ನೀಡಲಾಗಿತ್ತು..