ವಾಷಿಂಗ್ಟನ್: ಅಮೆರಿಕದಲ್ಲಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೆಲಂಗಾಣ (Telangana) ಮೂಲದ ಯುವತಿ ಅಮೆರಿಕದ (America) ಫ್ಲೋರಿಡಾದಲ್ಲಿ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಯಾದಗರಿಪಲ್ಲಿ ಮೂಲದ ಸೌಮ್ಯಾ (25) ಸಾವನ್ನಪ್ಪಿರುವ ದುರ್ದೈವಿ. ಸೌಮ್ಯಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಫ್ಲೋರಿಡಾ (Florida) ಅಟ್ಲಾಂಟಿಕ್ ವಿಶ್ವವಿದ್ಯಾನಿಲಯದಿಂದ ಸೌಮ್ಯ ಪದವಿ ಪೂರ್ಣ ಮಾಡಿದ್ದರು. ಆದರೆ, ಉದ್ಯೋಗಕ್ಕಾಗಿ ಅಲ್ಲಿಯೇ ಉಳಿದುಕೊಂಡಿದ್ದರು.
ಸೌಮ್ಯ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಕೆಯ ಮೃತದೇಹವನ್ನು ಭಾರತಕ್ಕೆ ತರುವಂತೆ ಆಕೆಯ ಪೋಷಕರಾದ ಕೋಟೇಶ್ವರ ರಾವ್ ಮತ್ತು ಬಾಲಾಮಣಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.