ರಸ್ತೆ ದಾಟುತ್ತಿದ್ದ ನಾಯಿ ಮೇಲೆ  ಕಾರು ಹರಿಸಿ ವಿಕೃತಿ….

1 min read

ರಸ್ತೆ ದಾಟುತ್ತಿದ್ದ ನಾಯಿ ಮೇಲೆ  ಕಾರು ಹರಿಸಿ ವಿಕೃತಿ….

ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರೋ ಅಮಾನವೀಯ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ 19ರಂದು ಬೆಳಗ್ಗೆ ಘಟನೆ ನಡೆದಿದ್ದು ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ.

ಅಪಘಾತಕ್ಕೊಳಗಾದ ನಾಯಿ ನಡು ರಸ್ತೆಯಲ್ಲೇ ವಿಲವಿಲ ಒದ್ದಾಡಿದೆ. ಇದನ್ನ ಕಂಡ ಮಹಿಳೆ ಆರೈಕೆ ಮಾಡಿದರೂ ಪ್ರಯೋಜನವಾಗಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ನಾಯಿ ಸಾವನ್ನಪ್ಪಿದೆ. ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಘಟನೆಗೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿದ್ದು ಆದಷ್ಟು ಬೇಗ ಚಾಲಕನನ್ನ  ಅರೆಸ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ.

ಘಟನೆ‌ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.  ಕಾರು ಚಾಲಕನ  ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದು, ಸತ್ಯನಾರಾಯಣ ಎಂಬ ವ್ಯಕ್ತಿಗೆ ಸೇರಿದ ಕಾರು ಎಂದಷ್ಟೇ ಗೊತ್ತಾಗಿದೆ.

ಸರ್ ಎಂ.ವಿ.ಲೇಔಟ್‍ನಲ್ಲಿ ವ್ಯಕ್ತಿಯೊಬ್ಬ ಬೀದಿನಾಯಿ ಮೇಲೆ ಕಾರು ಚಲಾಯಿಸಿ ಅದರ ಸಾವಿಗೆ ಕಾರಣವಾಗಿದ್ದಾನೆ. ಈ ಬಗ್ಗೆ FIR ದಾಖಲಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ. a car driver drove on street dog in bengaluru

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd