ಒಂದು ಶತಕ… ಎರಡು ದಾಖಲೆಗಳು… ಇದು ಆಫ್ ಸೈಡ್ ದೇವತೆ ಸ್ಮೃತಿ ಮಂದಾನ ಮಹಿಮೆ..!

1 min read
Smriti Mandana saaksha tv

ಒಂದು ಶತಕ… ಎರಡು ದಾಖಲೆಗಳು… ಇದು ಆಫ್ ಸೈಡ್ ದೇವತೆ ಸ್ಮೃತಿ ಮಂದಾನ ಮಹಿಮೆ..!

ಆಸೀಸ್ ನೆಲದಲ್ಲಿ ಇತಿಹಾಸ
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟೈಲಿಷ್ ಆಟಗಾರ್ತಿ ಸ್ಮೃತಿ ಮಂದಾನ..! ಅಮೋಘ ಆಟದಿಂದಲೇ ಗಮನ ಸೆಳೆದಿರುವ ಸ್ಮೃತಿ ಮಂದಾನ ಅವರು ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ಹೊಸ ಇತಿಹಾಸವನ್ನೇ ಬರೆದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ ಮಂದಾನ ಆಕರ್ಷಕ ಶತಕ ದಾಖಲಿಸಿದ್ದಾರೆ.

ಮಳೆಯ ಅಡಚಣೆಯ ನಡುವೆಯೇ ಮೊದಲ ದಿನ ಶತಕದ ಸನೀಹದಲ್ಲಿದ್ದ ಸ್ಮೃತಿ ಮಂದಾನ ಎರಡನೇ ದಿನ ಎರಡು ದಾಖಲೆಗಳ ಒಡತಿಯಾದ್ರು.

ಹೌದು, ಒಂದು ಶತಕ… ಎರಡು ದಾಖಲೆಗಳು ಸದ್ದಿಲ್ಲದೇ ಸ್ಮೃತಿ ಮಂದಾನ ಹೆಸರಿಗೆ ಸೇರ್ಪಡೆಗೊಂಡಿವೆ.

Smriti Mandana saaksha tv

ಆಸ್ಟ್ರೇಲಿಯಾ ಬೌಲರ್ ಗಳನ್ನು ಸುಸ್ತಾಗಿಸಿದ್ದ ಸ್ಮೃತಿ ಮಂದಾನ ೨೧೬ ಎಸೆತಗಳಲ್ಲಿ ೧೨೭ ರನ್ ಗಳಿಸಿ ಪೆವಿಲಿಯನ್ ಗೆ ಹಿಂತಿರುಗಿದ್ರು. ಇದರಲ್ಲಿ ಒಂದು ಸಿಕ್ಸರ್ ಮತ್ತು ೨೨ ಬೌಂಡ್ರಿಗಳಿದ್ದವು.

ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಶತಕ ದಾಖಲಿಸಿದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು.

ಅಲ್ಲದೆ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತದ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ಸ್ಮೃತಿ ಮಂದಾನ ಅವರ ಈ ಐತಿಹಾಸಿಕ ಸಾಧನೆಗೆ ಭಾರತದ ಮಾಜಿ ಕ್ರಿಕೆಟಿಗರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ದೊಡ್ಡ ಗಣೇಶ್, ವಾಸೀಮ್ ಜಾಫರ್, ಆಕಾಶ್ ಚೋಪ್ರಾ, ಮಾಜಿ ಮಹಿಳಾ ಆಟಗಾರ್ತಿ ಅಂಜುಮ್ ಚೋಪ್ರಾ ಸೇರಿದಂತೆ ಟ್ವಿಟರ್ ನಲ್ಲಿ ಸ್ಮೃತಿ ಮಂದಾನ ಅವರ ಶತಕದ ಸಾಧನೆಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd