ಕೋವಿಡ್ ಕುರಿತು ನ್ಯೂಟನ್ ನಾಲ್ಕನೇ ನಿಯಮ ಬರೆದ ಬಾಲಕ- ಪೋಟೋ ವೈರಲ್
ಕೋವಿಡ್ ಬಂದಾಗಿನಿಂದ ಶಾಲೆಗಳು ಬಂದ್ ಆಗಿವೆ… ಕೆಲವೊಮ್ಮೆ ಓಪನ್ ಆದರೂ ಮತ್ತೊಂದು ಅಲೆ ಸಮೀಪಿಸಿ ಮತ್ತೆ ಕ್ಲೋಸ್ ಆಗುತ್ತಿದೆ. ಇದರ ಕುರಿತು ಬಾಲಕನೊಬ್ಬ ನ್ಯೂಟನ್ ಲಾ ಹೋಲಿಸಿ ನೋಟ್ ಬುಕ್ ನಲ್ಲಿ ಬರೆದಿರುವ ತುಣುಕು ವೈರಲ್ ಆಗಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಮಗುವಿನ ನೋಟ್‌ಬುಕ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮಗು ನ್ಯೂಟನ್‌ನ ನಾಲ್ಕನೇ ನಿಯಮವನ್ನು ತಮಾಷೆಯಾಗಿ ವಿವರಿಸಿದೆ.
ಬಾಲಕ ನೋಟ್ ಬುಕ್ ಅಲ್ಲಿ “ನ್ಯೂಟನ್‌ನ ನಾಲ್ಕನೇ ನಿಯಮ: ಕರೋನಾ ಹೆಚ್ಚಾದಾಗ ಶಿಕ್ಷಣ ಕಡಿಮೆಯಾಗುತ್ತದೆ ಮತ್ತು ಕರೋನಾ ಕಡಿಮೆಯಾದಾಗ ಶಿಕ್ಷಣ ಹೆಚ್ಚಾಗುತ್ತದೆ.” ಅಂದರೆ, ಕರೋನಾ ಶಿಕ್ಷಣದ ವಿರುದ್ದವಾಗಿದೆ.
ಕರೋನಾ ಮತ್ತು ಅಧ್ಯಯನದ ನಡುವಿನ ಸಂಬಂಧವನ್ನು ವಿವರಿಸಲು ವಿದ್ಯಾರ್ಥಿಯು ಸಮೀಕರಣವನ್ನು ಬಳಸಿದ್ದಾನೆ. ಅವರು ‘k’ ಅನ್ನು ವೇರಿಯೇಬಲ್ ಆಗಿ ಬಳಸಿಕೊಂಡಿದ್ದಾನೆ.
ಶರಣ್ ಅವರು ತಮ್ಮ ಟ್ವೀಟ್‌ನ ಶೀರ್ಷಿಕೆಯಲ್ಲಿ, ಈ ಮಗು ಕರೋನಾ ಯುಗದ ನ್ಯೂಟನ್ ಎಂದು ಹೇಳಿದ್ದಾರೆ.
‘कोविड काल’ का न्यूटन. pic.twitter.com/5kZRckVBhP
— Awanish Sharan 🇮🇳 (@AwanishSharan) January 4, 2022
ಈ ಟ್ವೀಟ್‌ಗೆ ಇದುವರೆಗೆ 11 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಬಳಕೆದಾರರು, “ನ್ಯೂಟನ್‌ನ ಕೋವಿಡ್‌ನ ನಾಲ್ಕನೇ ನಿಯಮ” ಎಂದು ಕಾಮೆಂಟ್ ಮಾಡಿದ್ದಾರೆ.








