ಹಿಜಾಬ್ ಧರಿಸಿ ಅಧಿವೇಶನಕ್ಕೆ ಬಂದ ಕಾಂಗ್ರೇಸ್ ಶಾಸಕಿ Saaksha Tv
ಬೆಂಗಳೂರು: ಅಧಿವೇಶನಕ್ಕೆ ಹಿಜಾಬ್ ಧರಿಸಿಯೇ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜಾ ಫಾತಿಮಾ ಆಗಮಿಸಿದ್ದಾರೆ.
ಈ ಹಿಂದೆ ಹಿಜಬ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ್ದ ಅವರು ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಸಂಪ್ರದಾಯ, ಅದು ಹಕ್ಕಾಗಿದೆ. ನಾನು ಹಿಜಾಬ್ ಧರಿಸಿಯೇ ವಿಧಾನ ಸಭೆಗೆ ಹೋಗುತ್ತೇನೆ. ಧೈರ್ಯ ಇದ್ದರೇ ತಡೆಯಲಿ ಎಂದು ಶಾಸಕಿ ಸವಾಲೊಡ್ಡಿದ್ದರು.
ಅದರಂತೆ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದಿನ ಅಧಿವೇಶನಗಳಲ್ಲೂ ಹಿಜಾಬ್ ಧರಿಸಿಯೇ ಕಲಾಪದಲ್ಲಿ ಪಾಲ್ಗೊಂಡಿದ್ದರು.
ಹಿಜಬ್‍ನ್ನು ನಾವು ಮೊದಲಿನಿಂದ ಧರಿಸುತ್ತಿದ್ದೇವೆ. ಈಗ ಹೊಸದಾಗಿ ಹಿಜಾಬ್ ಧರಿಸುತ್ತಿಲ್ಲ. ನಾನು ಕೂಡ ವಿಧಾನಸಭೆಗೆ ಹಿಜಾಬ್ ಧರಿಸಿಯೇ ಹೋಗಿದ್ದೇನೆ, ಮುಂದೆಯೂ ಹಿಜಬ್ ಧರಿಸಿಯೇ ಹೋಗುತ್ತೇನೆ. ಧೈರ್ಯ ಇದ್ದರೆ ನನ್ನನ್ನು ತಡೆಯಲಿ ಎಂದು ಹೇಳಿದರು.