Yadagiri – ಕರುವಿನ ಜೊತೆಗೆ ಹಂದಿಗೂ ಹಾಲುಣಿಸಿದ ಗೋಮಾತೆ..
ಗೋವನ್ನ ನಮ್ಮ ನಾಡಿನಲ್ಲಿ ಮಾತೆಯಂತೆ ಕಾಣುತ್ತೇವೆ. ಗೋವಿನ ಕುರಿತ ಹಲವು ಕಥೆಗಳನ್ನ ಕೇಳಿದ್ದೇವೆ. ಇದೀಗ ಗೋವು ತನ್ನ ಕರುವಿನ ಜೊತೆಗೆ ಹಂದಿಗೆ ಹಾಲುಣಿಸಿ ತನ್ನ ಮಾತೃ ಪ್ರೇಮವನ್ನ ಮೆರದಿದೆ.
ಯಾದಗಿರಿ ಜಿಲ್ಲೆ ಸುರುಪುರದ ನಗರದ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲ ಆವರಣದಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ಹಸು ವರಹಕ್ಕೆ ಹಾಲುಣಿಸಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿತು.
ಹಸು ತನ್ನ ಕರುವಿನೊಂದಿಗೆ ಆವರಣದಲ್ಲಿ ಸಂಚರಿಸುತ್ತಿರುವಾಗ ದೇವರ ಬಾವಿ ಕಡೆಯಿಂದ ಬಂದ ಹಂದಿ ನೋಡ ನೋಡುತ್ತಲೇ ಗೋಮಾತೆಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಸವಿದಿದೆ. ಹಸು ಕೂಡ ಕದಲದೆ ಶಾಂತ ಚಿತ್ತದಿಂದ ಹಾಲುಣಿಸಿದೆ.
ದೇವಸ್ಥಾನದ ಬಳಿ ನೆರೆದಿದ್ದ ಭಕ್ತರು ಈ ಈ ಘಟನೆಯನ್ನ ರೆಕಾರ್ಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.