ಬೆಂಗಳೂರು: 40 ಅಡಿಯ ರಾಮನ ಕಟೌಟ್ (Rama Cutout) ಧರೆಗುರುಳಿದ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ನಂದಿನಿ ಲೇಔಟ್ ನ ಕೃಷ್ಣಾನಂದ ನಗರ ವೃತ್ತದಲ್ಲಿ ನಡೆದಿದೆ. ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ (Ayodhya Pran Prathistha ceremony) ಹಿನ್ನೆಲೆಯಲ್ಲಿ ರಾಮನ ಈ ಬೃಹತ್ ಕಟೌಟ್ ಸ್ಥಾಪಿಸಲಾಗಿತ್ತು. ನಂತರ ಬಿಬಿಎಂಪಿ ತೆರವು ಮಾಡಿರಲಿಲ್ಲ. ಅದೃಷ್ಟವಶಾತ್ ಕಟೌಟ್ ಬೀಳುವ ಸಂದರ್ಭದಲ್ಲಿ ವಾಹನಗಳು ಹಾಗೂ ವ್ಯಕ್ತಿಗಳು ಸಂಚರಿಸುತ್ತಿರಲಿಲ್ಲ. ಹೀಗಾಗಿ ದೊಡ್ಡ ದುರಂತ ತಪ್ಪಿದಂತಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ನಿಲ್ಲಿಸಿದ್ದ ಕಟೌಟ್ ಬಿದ್ದಿರುವುದಕ್ಕೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ.