ಬಳ್ಳಾರಿ: ಬುದ್ಧಿಮಾಂದ್ಯ ವ್ಯಕ್ತಿಯೊಬ್ಬ ಭತ್ತದ ಹುಲ್ಲಿನ ಬಣವಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ಅಪಾರ ಪ್ರಮಾಣದ ಹುಲ್ಲು ಸುಟ್ಟು ಕರಕಲಾಗಿದೆ.
ಈ ಘಟನೆ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದ್ದು, ಸುಮಾರು 40 ಟ್ರ್ಯಾಕ್ಟರ್ ನಷ್ಟು ಹುಲ್ಲಿನ ಬಣವೆಯನ್ನು ತಾಯಣ್ಣ, ರಾಘವೇಂದ್ರ, ಶೇಖರ್ ಎಂಬುವವರು ಬಣವೆಗಳನ್ನು ಒಟ್ಟಿದ್ದರು.
ಸದ್ಯ ಈಗ ಅಪಾರ ಪ್ರಮಾಣದ ಬಣವೆಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಸಿರಗುಪ್ಪ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.