ಭಕ್ತ ಪ್ರಿಯ ಮಂಜುನಾಥನಿಗೆ ಐಸ್ ಕ್ರೀಂ ಅಭಿಷೇಕ
ಕೈಲಾಸವಾಸಿ ಶಿವ ಭಕ್ತ ಪ್ರಿಯ. ಭಕ್ತರು ಪ್ರೀತಿಯಿಂದ ಏನು ಕೊಟ್ಟರು ಸ್ವೀಕರಿಸುತ್ತಾನೆ. ಸದಾ ಮಂಜಿನ ಪರ್ವತಗಳ ನಡುವೆಯೇ ಇರುವ ಮಂಜುನಾಥನಿಗೆ ಭಕ್ತನೊಬ್ಬ ಐಸ್ ಕ್ರೀಂನಿಂದ ಅಭಿಷೇಕ ಮಾಡಿದ್ದಾನೆ.
ಆಂಧ್ರಪ್ರದೇಶದ ಪಾಲಕೋಲಿನ ದೇವೆಲ್ಲ ನರಸಿಂಹ ಮೂರ್ತಿ ಭಕ್ತನೊಬ್ಬ ಶಿವಲಿಂಗ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ನೀಡಿದ್ದಾನೆ. ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನಿಗೆ, ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ಅರ್ಪಿಸಿದ್ದಾರೆ, ಐಸ್ ಕ್ರೀಮ್ ಅನ್ನು ಶಿವಲಿಂಗದ ಮೇಲೆ ಅಭಿಷೇಕ ಮಾಡಲಾಗಿದೆ.
ಅದು ಶಿವಲಿಂಗದ ಸುತ್ತ ತುಂಬಿಕೊಂಡು ಅದ್ಬುತವಾಗಿ ಕಾಣಿಸಿದೆ. ಆ ಅದ್ಭುತ ದೃಶ್ಯವನ್ನು ವೀಕ್ಷಿಸಲು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ದೇವರ ಪ್ರಸಾದವಾಗಿ ತಣ್ಣನೆಯ ಐಸ್ ಕ್ರೀಮ್ ಅನ್ನು ಭಕ್ತರು ಪಡೆದರು.








