ಯಾರಿಗೆ ಯಾವ ಸಮಯದಲ್ಲಿ ಅದೃಷ್ಟ ಕೈ ಹಿಡಿಯುತ್ತದೆಯೋ ತಿಳಿಯುವುದಿಲ್ಲ. ಚಾಲಕನೊಬ್ಬ ಕೇವಲ 49 ರೂ.ದಿಂದ ರಾತ್ರೋರಾತ್ರಿ ಇಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ.
ಶಹಾಬುದ್ದೀನ್ ಮನ್ಸೂರಿ ಅವರು ಕಳೆದ ಎರಡು ವರ್ಷಗಳಿಂದ ಆನ್ಲೈನ್ ಗೇಮಿಂಗ್ ಆ್ಯಪ್‌ನಲ್ಲಿ ಟೀಮ್ ಮಾಡುತ್ತಲೇ ಇದ್ದರು. ಭಾನುವಾರ ಐಪಿಎಲ್‌ನಲ್ಲಿ ನಡೆದ ಕೆಕೆಆರ್ ಹಾಗೂ ಪಂಜಾಬ್ ನಡುವಿನ ಪಂದ್ಯಕ್ಕೆ ತಮ್ಮ ಕನಸಿನ ತಂಡ ಮಾಡಿ 49 ರೂ.ಯನ್ನು ಕಟ್ಟಿದ್ದಾರೆ. ಕೋಟಿ ಗೆಲ್ಲುವ ವಿಭಾಗದಲ್ಲಿ ತಂಡವನ್ನು ಕಟ್ಟಿದ ಶಹಾಬುದ್ದೀನ್ ಮನ್ಸೂರಿ ಪಂದ್ಯ ಮುಗಿದ ಬಳಿಕ 1.50 ಕೋಟಿ ಗೆದ್ದಿದ್ದಾರೆ.
ಶಹಾಬುದ್ದೀನ್ ತನ್ನ ಆ್ಯಪ್ ವ್ಯಾಲೆಟ್‌ನಿಂದ ರೂ 20 ಲಕ್ಷವನ್ನು ವಿತ್ ಡ್ರಾ ಮಾಡಿಕೊಂಡಿದ್ದು, ವಿಜೇತ ಮೊತ್ತದ 1.5 ಕೋಟಿ ರೂ.ನಲ್ಲಿ ಒಟ್ಟು ರೂ.6 ಲಕ್ಷ ತೆರಿಗೆಯಾಗಿ ಕಟ್ಟಿದ್ದಾರೆ. ಕೆಲವೊಂದು ಬಾರೀ ಇಂತಹ ಆನ್ಲೈನ್ ಗೇಮಿಂಗ್ ಆ್ಯಪ್‌ನಿಂದ ಅನೇಕ ಮಂದಿ ಹಣ ಕಳೆದುಕೊಂಡಿರುವುದನ್ನು ಕೂಡ ನಾನು ಕಾಣುತ್ತೇವೆ. ಇದೀಗ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಚಾಲಕರೊಬ್ಬರು ನ್ಲೈನ್ ಗೇಮಿಂಗ್ ಆ್ಯಪ್‌ನಿಂದ ಕೋಟ್ಯಾಧಿಪತಿಯಾಗಿದ್ದಾರೆ.








