ಚಾಲಕ ರಹಿತ ಮೆಟ್ರೋ ಟ್ರಯಲ್ ರನ್ ನ್ನು ಸಂಸದ ತೇಜಸ್ವಿ ಸೂರ್ಯ ಪರಿಶೀಲಿಸಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಹಳದಿ ಮಾರ್ಗದ ಲೋಕೋ ಪೈಲಟ್ ಲೆಸ್ ಮೆಟ್ರೋ ರೈಲು ಟ್ರಯಲ್ ಪರಿಶೀಲನೆ ನಡೆಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಟ್ರೈನ್ ನಲ್ಲಿ ಕುಳಿತು ಸಂಚಾರ ನಡೆಸಿದ್ದಾರೆ. ಈ ವೇಳೆ ಮೆಟ್ರೋ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇತ್ತು.
ತಾಂತ್ರಿಕ ಹಾಗೂ ಸುರಕ್ಷತೆಯ ಕುರಿತು ಮೆಟ್ರೋ ಅಧಿಕಾರಿಗಳಿಂದ ತೇಜಸ್ವಿ ಸೂರ್ಯ ಮಾಹಿತಿ ಪಡೆದರು. ಬೊಮ್ಮಸಂದ್ರ ಹಾಗೂ ಬೊಮ್ಮನಹಳ್ಳಿ ನಡುವೆ ಈ ಚಾಲಕ ರಹಿತ ಟ್ರೈನ್ ಸಂಚಾರ ನಡೆಸಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯಾರಂಭವಾಗಲಿದೆ ಎಂದು ಈ ವೇಳೆ ಸಂಸದರು ಹೇಳಿದ್ದಾರೆ.